ಕೆಜಿಎಫ್ 2 ಆಡಿಷನ್​ಗೆ ಬಂದವರೆಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರ.!

Date:

ಕನ್ನಡ ಚಿತ್ರರಂಗದ ಮೈಲಿಗಲ್ಲು ಅಂದ್ರೆ ಅದು ರಾಕಿಂಗ್​ ಸ್ಟಾರ್ ಯಶ್​ ಅಭಿನಯದ ಕೆಜಿಎಫ್ ಚಿತ್ರ.​ ಸಿನಿಮಾ. ಇಡೀ ಭಾರತ ಮಾತ್ರವಲ್ಲ ವಿಶ್ವಾದ್ಯಂತ ತೆರೆಕಂಡು ಹೊಸ ಮೈಲಿಗಲ್ಲು ಸೃಷ್ಟಿಸಿದ ಕನ್ನಡದ ಹೆಮ್ಮೆಯ ಸಿನಿಮಾ. ಮತ್ತೆ ಇದೀಗ ಎಲ್ಲೆಡೆ ಕೆಜಿಎಫ್​ ಪಾರ್ಟ್​ 2 ಫೀವರ್ ಶುರುವಾಗಿದೆ.
ಕೆಜಿಎಫ್ 2′ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾರು ತಾನೆ ಮಿಸ್ ಮಾಡಿಕೊಳ್ಳುತ್ತಾರೆ. ಸಣ್ಣ ಪಾತ್ರ ಆದರೂ ಸರಿ, ಡೈಲಾಗ್ ಇಲ್ಲ ಅಂದ್ರೂ ಓಕೆ ಕೆಜಿಎಫ್ ಇಂತಹ ಸಿನಿಮಾನದಲ್ಲಿ ನಮ್ಮ ಕಂಡ್ರೆ ಸಾಕು ಎನ್ನುವ ಮಹಾದಾಸೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತೆ.
ಕೆಜಿಫ್​ ಪಾರ್ಟ್​ 2 ಸಿನಿಮಾ ಕೆಲವು ಪಾತ್ರಗಳಿಗೆ ಮಲ್ಲೆಶ್ವರಂ ರಿಯಾಜ್​ ಹೋಟೆಲ್​ನಲ್ಲಿ ಆಡಿಷನ್ ನಡೆಯಿತು. ಆಡಿಷನ್​ಗಾಗಿ ಜನ ಸಾಗರವೇ ಹರಿದು ಬಂದಿತ್ತು. ಕನ್ನಡದ ಬ್ಲಾಕ್​ ಬ್ಲಾಸ್ಟರ್​ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಸಾವಿರಾರು ಮಂದಿ ಬೆಳಗ್ಗೆಯಿಂದಲೇ ಕಾದು ನಿಂತಿದ್ರು. ಆಡಿಷನ್​ಗೆ ಕಾದು ನಿಂತವರ ಸಾಲು ಹನುಮನ ಬಾಲದಂತೆ ಕಿಲೋಮೀಟರ್​ಗಟ್ಟಲೆ ಉದ್ದ ಇತ್ತು.
ಸುಮಾರು 8ರಿಂದ 16 ವರ್ಷದ ಬಾಲಕರು ಮತ್ತು 25 ದಾಟಿದ ಪುರುಷರು ಈ ಆಡಿಷನ್‍ನಲ್ಲಿ ಭಾಗವಹಿಸಿದ್ರು. ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಧಾರವಾಡ ಮತ್ತು ಹಾವೇರಿ ಸೇರಿದಂತೆ ಅನೇಕ ಜಿಲ್ಲೆಯಗಳಿಂದಲೂ ಆಡಿಷನ್‍ಗಾಗಿ ಜಮಾಯಿಸಿದ್ರು. ಒಂದು ನಿಮಿಷ ಕಾಲವಕಾಶದಲ್ಲಿ ತಮ್ಮ ನೆಚ್ಚಿನ ಡೈಲಾಗ್​ಗಳನ್ನು ಹೊಡೆದು ತಮ್ಮ ಕಲಾ ಸಾಮಾರ್ಥ್ಯವನ್ನು ತೋರಿಸಿದ್ರು.
ಇನ್ನೋಂದು ವಿಶೇಷತೆ ಅಂದ್ರೆ ಮೊದಲ ಸಿನಿಮಾದಲ್ಲಿ ಗಡ್ಡಧಾರಿಯಾಗಿ ಮಿಂಚಿದ್ದ ವಿಲನ್‍ಗಳನ್ನು ನೋಡಿ ಅವರಂತೆಯೇ ಗಡ್ಡ ಬೆಳೆಸಿಕೊಂಡಿದ್ದ ಯವಕರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...