ಕೊನೆಗೂ ಹೆಂಡತಿ ಹೆಸರು ಬಿಟ್ಟು ಅವರ ಬಗ್ಗೆ ಬೇರೆ ಏನು ಗೊತ್ತಿಲ್ಲ ಎಂದ ಮೋದಿ..!?

Must read

ನರೇಂದ್ರ ಮೋದಿ ಅವರು ಇಂದು ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ್ದು, ತಮ್ಮ ಶಿಕ್ಷಣ, ಆಸ್ತಿಯ ಜೊತೆಗೆ ಕುಟುಂಬ ಬಗ್ಗೆಯೂ ಮಾಹಿತಿ ನೀಡಿದ್ದಾರೆ, ಮೋದಿ ಅವರ ನಾಮಪತ್ರದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವುದು ಅವರ ಪತ್ನಿ ಹೆಸರು.

ಮೋದಿಗುಜರಾತ್ ಸಿಎಂ ಆಗಿದ್ದಾಗ, ಬಹುತೇಕರು ಅವರು ಅವಿವಾಹಿತ ಎಂದೇ ನಂಬಿದ್ದರು. ಆದರೆ ಪ್ರಧಾನಿ ಅಭ್ಯರ್ಥಿಯಾಗಿ ಗುರುತಿಸಿಕೊಂಡ ನಂತರ ಮೋದಿ ಅವರಿಗೆ ಮದುವೆಯಾಗಿರುವುದು ಬೆಳಕಿಗೆ ಬಂತು.

ಮೋದಿ ಅವರು ಯಶೋಧಾಬೆನ್ ಎಂಬುವರನ್ನು ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು, ಆದರೆ ನಂತರ ಸಂಸಾರವನ್ನು ಬಿಟ್ಟಿದ್ದು ಈಗ ಹಳೆ ಕಥೆ.

ನರೇಂದ್ರ ಮೋದಿ ಅವರ ಪತ್ನಿ ಯಶೋಧಾ ಬೆನ್ ಅವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಅದನ್ನು ಬಿಟ್ಟು ಹೆಂಡತಿ ಕಾಲಂ ನಲ್ಲಿ ಯಶೋಧಾಬೆನ್ ಅವರ ಹೆಸರನ್ನು ಬರೆದಿದ್ದಾರೆ ಹೊರತು. ಅವರ ಬಗ್ಗೆ ಬೇರೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ನಾಮಪತ್ರದಲ್ಲಿ ನಮೂದಿಸಿದ್ದಾರೆ.

- Advertisement -spot_img

More articles

- Advertisement -spot_img

Latest article