ಕೆಜಿಎಫ್ ಚಿತ್ರ ಭಾರತೀಯ ಸಿನಿಮಾ ಇತಿಹಾಸದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂತಹ ಕನ್ನಡ ಸಿನಿಮಾ ನಿರೀಕ್ಷೆಗೂ ಮೀರಿ ಸಿನಿಮಾನ ಮೆಚ್ಚಿಕೊಂಡಿದ್ದರು ಇಡೀ ಭಾರತದ ಪ್ರೇಕ್ಷಕರು.
ಕೆಜಿಎಫ್ ಸಿನಿಮಾದ ಪ್ರತಿ ಪಾತ್ರವೂ ಜನಮಾನಸದಲ್ಲಿ ಉಳಿದುಕೊಂಡಿದೆ ಅದರಲ್ಲೂ ರೀನಾ ಪಾತ್ರದಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ಮೆಚ್ಚುಗೆಯನ್ನು ಗಳಿಸಿ ಪಡ್ಡೆ ಹೈಕಳ ಮನವನ್ನು ಗೆದ್ದಿದ್ದರು ಚಾಪ್ಟರ್ 2 ಕಥೆಯಲ್ಲೂ ಶ್ರೀನಿಧಿಗೆ ಪ್ರಾಮುಖ್ಯತೆ ಹೆಚ್ಚಿದ್ದು ತಯಾರಿ ನಡೆಸುತ್ತಿದ್ದಾರೆ ಇದ್ರ ನಡುವೆಯೇ ಅವರ ಫೋಟೋ ಒಂದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಕೆಜಿಎಫ್ ನ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ಆರಂಭವಾಗುತ್ತಿದ್ದು ಏಪ್ರಿಲ್ ಮೊದಲ ವಾರದಿಂದಲೇ ಸಿನಿಮಾ ಕೆಲಸ ಸಾಗುತ್ತಿದೆ ಇದರ ಮಧ್ಯೆ ಕೆಜಿಎಫ್ ನ ನಾಯಕಿ ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು ಮಾಡಿಕೊಂಡಿರುವುದು ಅವರ ಅಭಿಮಾನಿಗಳಿಗೆ ಆತಂಕವನ್ನು ಉಂಟುಮಾಡಿದೆ.
ಹಸು ಮತ್ತು ಕುರಿಯ ಜೊತೆಗಿರುವ ತಮ್ಮ ಫೋಟೋವನ್ನು ಶ್ರೀನಿಧಿ ಶೆಟ್ಟಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಅದರಲ್ಲಿ ಅವರ ಕೈಗೆ ಪೆಟ್ಟು ಬಿದ್ದಿರುವುದು ಗೊತ್ತಾಗುತ್ತದೆ ಚಾಪ್ಟರ್ 2 ಚಿತ್ರೀಕರಣಕ್ಕೆ ಮೊದಲೇ ಕೈಗೆ ಪೆಟ್ಟು ಬಿದ್ದಿರುವುದನ್ನು ಕಂಡ ಅಭಿಮಾನಿಗಳು ಶ್ರೀನಿಧಿಗೆ ಏನಾಯ್ತು ಅಂತ ಆತಂಕಗೊಂಡಿದ್ದಾರೆ.
ಇನ್ನೇನು ಸದ್ಯದಲ್ಲೇ ಕೆಜಿಎಫ್ ಟು ಚಿತ್ರೀಕರಣ ಆರಂಭವಾಗಲಿದೆ ಅಷ್ಟರಲ್ಲಿ ಶ್ರೀನಿಧಿ ಗುಣಮುಖ ಆಗ್ತಾರೆ ಅನ್ನೋ ಅನುಮಾನ ಇದೀಗ ಎಲ್ಲರನ್ನೂ ಕಾಡಿದೆ