ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

Date:

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

ನಿಮಗೆ ನೆನಪಿರಬಹುದು . ಸೆಲೆಬ್ರಿಟಿ ಕ್ರಿಕೆಟ್ ಲೀಗ್ ( ಸಿ ಸಿ ಎಲ್ ) ಸಮಯದಲ್ಲಿ ಕ್ರಿಕೆಟರ್ ಒಬ್ಬರು ತನ್ನೊಡನೆ ಅನುಚಿತವಾಗಿ ವರ್ತಿಸಿದ್ದರು . ಅದಕ್ಕೆ ಪ್ರಿಯಾಮಾಣಿ ಆತನಿಗೆ ಕಪಾಳ ಮೋಕ್ಷ ಮಾಡಿದ್ದರು ಎಂಬ ಗಾಳಿ ಸುದ್ದಿ ಈ ಹಿಂದೆ ಹರಿದಾಡಿತ್ತು . ಈ ಘಟನೆ ಕುರಿತು ಪ್ರಿಯಾಮಣಿ ಇದೀಗ ಸ್ಪಷ್ಟನೆ ನೀಡಿದ್ದಾರೆ . ಸಂದರ್ಶನವೊಂದರಲ್ಲಿ ಆ ಬಗ್ಗೆ ಮಾತನಾಡಿದ್ದಾರೆ .

ಬಹು ಭಾಷಾ ನಟಿ ಆಗಿರುವ ಪ್ರಿಯಾಮಣಿ ಕನ್ನಡ ಚಿತ್ರರಂಗಕ್ಕೂ ಹತ್ತಿರ ಹತ್ತಿರ .‌ ಕನ್ನಡ ಚಿತ್ರಾಭಿಮಾನಿಗಳಿಗೂ ಅವರು ಪರಿಚಿತ . ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ಸಿನಿರಂಗದಲ್ಲೂ ಅವರು ಅಭಿನಯಿಸುತ್ತಿದ್ದಾರೆ . ಈ ಸ್ಟಾರ್ ನಟಿ, ವಿವಾದ, ಗಾಸಿಪ್ ಎಲ್ಲದರಿಂದ ದೂರ ದೂರ … ಸಿನಿಮಾ ತಾನು ತನ್ನ ಪಾಡಷ್ಟೇ ಅಂತಿರುವ ಬೆಡಗಿ .‌ಆದರೂ ಕೆಲವೊಮ್ಮೆ ಗಾಸಿಪ್ ಗಳೇ ಅವರನ್ನು ಬಿಡಲ್ಲ …

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ( ಸಿ ಸಿ ಎಲ್ ) ರಾಯಭಾರಿ ಆಗಿರುವ ಅವರಿಗೆ ಕೆಟ್ಟ ಅನುಭವಾಗಿತ್ತು ‌. ಅಂತೆ ಕಂತೆ ಗಾಳಿ ಸುದ್ದಿಗಳು ಕಾಡ್ಗಿಚ್ಚಂತೆ ಹಬ್ಬಿದ್ದವು .

ಸಿ ಸಿ ಎಲ್ ಸಂದರ್ಭದಲ್ಲಿ ಪ್ರಿಯಾಮಣಿ ಜೊತೆ ಕ್ರಿಕೆಟಿಗರೊಬ್ಬರು ಅನುಚಿತವಾಗಿ ವರ್ತಿಸಿದ್ದರು . ಅವರಿಗೆ ಆಕೆ ಕಪಾಳ ಮೋಕ್ಷ ಮಾಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು . ಬಹುತೇಕ ಸಿನಿ ತಾರೆಯರೇ ತುಂಬಿದ್ದ ಟೂರ್ನಿಯಲ್ಲೇ ನಟಿಗೆ ಇದೆಂಥಾ ಅಪಮಾನ ಎಂಬ ಕಾರಣಕ್ಕೆ ಆ ಸುದ್ದಿಗೂ ಮಹತ್ವ ಬಂದಿತ್ತು .

ಈ ಬಗ್ಗೆ ಪ್ರಿಯಾಮಣಿ ಮಾತನಾಡಿದ್ದಾರೆ.
” ಒಬ್ಬ ವ್ಯಕ್ತಿ ನನ್ನ ಮೊಬೈಲ್ ಫೋನ್ ಕದ್ದು ಪ್ರಾಂಕ್ ಮಾಡುತ್ತಿದ್ದ. ನಾನಾ ರೀತಿಯಲ್ಲಿ ಹಿಂಸಿಸಿದ. ಬಳಿಕ ಫೋನ್ ಕದ್ದ ವ್ಯಕ್ತಿ ಸ್ವತಃ ನನ್ನ ಹೋಟೆಲ್ ಕೊಠಡಿಗೆ ಆಗಮಿಸಿ ಭೇಟಿಯಾದ. ನನ್ನೊಂದಿಗೆ ವರ್ತಿಸಿದ ರೀತಿ ಸರಿಯಿಲ್ಲ ಎಂದು ಎಚ್ಚರಿಸಿ ಕಳುಹಿಸಿದೆ. ಆ ವ್ಯಕ್ತಿಯ ಹೆಸರು ಹೇಳಲು ನನಗೆ ಇಷ್ಟವಿಲ್ಲ. ಆ ವ್ಯಕ್ತಿಯ ಮೇಲೆ ನನಗೆ ಸಿಕ್ಕಾಪಟ್ಟೆ ಕೋಪ ಇದೆ. ಮುಖ್ಯವಾಗಿ ಆ ಫೋನ್ ನನ್ನ ಅಣ್ಣನದಾಗಿತ್ತು. ಆ ಘಟನೆ ಒಂದು ರೀತಿ ಕಹಿ ಅನುಭವ. ಆದರೆ ನಾನು ಆತನನ್ನು ಹೊಡೆದೆ ಎಂಬ ಸುದ್ದಿಯಲ್ಲಿ ಹುರುಳಿಲ್ಲ” ಎಂದು ಪ್ರಿಯಾಮಣಿ ಸ್ಪಷ್ಟೀಕರಣ ನೀಡಿದ್ದಾರೆ .
ಇಷ್ಟಕ್ಕೂ ಪ್ರಿಯಾಮಣಿಗೆ ಕಿರಿಕಿರಿ ನೀಡಿದ ಆ ಕ್ರಿಕೆಟರ್ ಯಾರು ಎಂಬ ಪ್ರಶ್ನೆಗೆ ಮಾತ್ರ ಪ್ರಿಯಾಮಣಿ ಉತ್ತರ ನೀಡಿಲ್ಲ.
ರಾಣಾ ದಗ್ಗುಬಾಟಿ ಹಾಗೂ ಸಾಯಿ ಪಲ್ಲವಿ ತಾರಾಗಣದ ವಿರಾಟ ಪರ್ವಂ 1992 ಸಿನಿಮಾದಲ್ಲಿ ನಕ್ಸಲೈಟ್ ಆಗಿ ಅಭಿನಯಿಸುತ್ತಿದ್ದಾರೆ .
ಜೊತೆಗೆ ವೆಂಕಟೇಶ್ ಅವರ ನಾರಪ್ಪ ಸೇರಿದಂತೆ ಅಜಯ್ ದೇವಗನ್ ಜೊತೆಗೆ ಮೈದಾನ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

ಸಿನಿಮಾಗಳಲ್ಲದೆ ಕೆಲವೊಂದು ಟಿವಿ ಶೋಗಳಲ್ಲಿ ತೀರ್ಪುಗಾರರಾಗಿ ಸದ್ಯ ಪ್ರಿಯಾಮಣಿ ಫುಲ್ ಬ್ಯುಸಿ ಇದ್ದಾರೆ .

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ ..!

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

Share post:

Subscribe

spot_imgspot_img

Popular

More like this
Related

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ. ಶಿವಕುಮಾರ್

ನ್ಯಾಷನಲ್ ಹೆರಾಲ್ಡ್ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ: ಡಿ.ಕೆ....

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ

ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ; ಬೆಂಗಳೂರಿನಲ್ಲಿ ಚಳಿಯ ಮುನ್ಸೂಚನೆ ಬೆಂಗಳೂರು: ಕರಾವಳಿ ಹಾಗೂ...

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...