ಕೆಪಿಸಿಸಿ ಅಧ್ಯಕ್ಷರು ರಾಜೀನಾಮೆ ಕೊಟ್ಟ ಬಳಿಕ ಸಾಕಷ್ಟು ಬೆಳವಣಿಗೆಗಳಾಗಿವೆ. ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಹಿಂಪಡೆಯಲು ಒಪ್ಪುತ್ತಿಲ್ಲ, ಹಾಗೆಂದು ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡುತ್ತಿಲ್ಲ.ಪಕ್ಷ ಸಂಘಟನೆ ಸಂಪೂರ್ಣವಾಗಿ ಸೊರಗಿ ಹೋಗುತ್ತಿದೆ. ಒಂದು ವೇಳೆ ರಾಜಕೀಯವಾಗಿ ಬಿಜೆಪಿಯಲ್ಲಿ ಭಿನ್ನಮತಗಳು ಸೃಷ್ಟಿಯಾದರೆ, ಮತ್ತೆ ಕಾಂಗ್ರೆಸ್‍ಗೆ ಸರ್ಕಾರ ರಚಿಸುವ ಅವಕಾಶ ಎದುರಾಗಲಿದೆ. ಈ ಹಂತದಲ್ಲಿ ಕಾಂಗ್ರೆಸ್‍ಗೆ ಗಟ್ಟಿ ನಾಯಕತ್ವದ ಅಗತ್ಯವಿದೆ ಎಂದು ಪ್ರಮುಖ ನಾಯಕರು ಇ-ಮೇಲ್‍ನಲ್ಲಿ ಸಲಹೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪೈಕಿ ಯಾರನ್ನಾದರೂ ನೇಮಕ ಮಾಡಿ. ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಕೂಡಲೇ ನೇಮಕಾತಿ ಆದೇಶ ಹೊರಡಿಸಿ ಎಂದು ಪಕ್ಷದವರೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.