ಹೀಗೂ ಉಂಟಾ?! ಈ ರಾಜ ದಿನ 35 ಕೆಜಿ ಊಟ ಮಾಡ್ತಿದ್ದ, ವಿಷ ಕುಡೀತಿದ್ದ!

0
503

ಅಬ್ಬಾಬ್ಬ ಅಂದ್ರೆ ಎಷ್ಟು ಊಟ ಮಾಡಬಹದು? ಹೊಟ್ಟೆ ತುಂಬಿದ ಮೇಲೆ ಮತ್ತೆ ತಿಂದಷ್ಟೇ ತಿನ್ನೋದಂತು ಕಷ್ಟ ಸಾಧ್ಯ..! ಹೊಟ್ಟಿಬಿರಿಯುವಂತೆ ತಿಂದ್ರೆ ಕೂತಲ್ಲಿಂದ ಎತ್ತೋಕೆ ಜನ ಬೇಕು..! ಗಾಢ ನಿದ್ರೆಗೆ ಜಾರ್ತೀವಿ…!
ಆದರೆ, ರಾಜನೊಬ್ಬ ಪ್ರತಿದಿನ‌ 35 ಕೆ.ಜಿ ಊಟ ಮಾಡ್ತಿದ್ದನಂತೆ..!

ಗುಜರಾತ್ ನ ರಾಜನಾಗಿದ್ದ ಮೆಹಮೂದ್ ಬೇಗಾಡ್ ನೇ ಅಷ್ಟೊಂದು ಊಟ ಮಾಡುತ್ತಿದ್ದ ರಾಜ. ಈತನಿಗೆ ಮಹಮೂದ್ ಶಾಹ್ ಎಂಬ ಹೆಸರು ಸಹ ಇದೆ. 1458 ರಿಂದ 1511 ರ ಅವಧಿಯಲ್ಲಿ 53 ವರ್ಷಗಳ ಕಾಲ ಆಳ್ವೀಕೆ ನಡೆಸಿದ್ದ.
ಈತ ದೇಹವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಿಕ್ಕಾಟಪಟ್ಟೆ ಊಟ ಮಾಡ್ತಿದ್ದನಂತೆ…!

ಈತನಿಗೆ ಯಾರೋ ಒಮ್ಮೆ ವಿಷ ಹಾಕಿ ಕೊಲ್ಲಲು ಯತ್ನಿಸಿದ್ದರಂತೆ. ಅಂದಿನಿಂದ ಪ್ರತಿನಿತ್ಯ ವಿಷ ಸಹ ಈತನ ಊಟದ ಭಾಗವಾಗಿತ್ತತಂತೆ. ವಿಷ ನಿರೋಧಕ ಶಕ್ತಿಗಾಗಿ ದಿನ ವಿಷ ಸೇವಿಸುತ್ತಿದ್ದ ಎಂದು ಯುರೋಪಿಯನ್ ಇತಿಹಾಸಕಾರರಾದ ಬಾರ್ಬೋಸಾ ಹಾಗೂ ವರ್ತೆಮಾ ಹೇಳಿದ್ದಾರೆ. ಇದೇ ಇತಿಹಾಸಕಾರರು ಈ ರಾಜ 35-37 ಕೆಜಿ ಊಟ ಮಾಡ್ತಿದ್ದ ಎಂದಿದ್ದಾರೆ.

ಅಷ್ಟೇ ಅಲ್ಲದೆ ಈತನ ಆಹಾರ ಕ್ರಮದಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ. ಈ ರಾಜ ನಿತ್ಯ ಬೆಳಗ್ಗೆ 1ಕಪ್ ಜೇನುತುಪ್ಪ ಹಾಗೂ 1ಕಪ್ ತುಪ್ಪದೊಂದಿಗೆ 150 ಬಾಳೆಹಣ್ಣಗಳನ್ನು ತಿನ್ನುತ್ತಿದ್ದನಂತೆ.
ಊಟದಲ್ಲಿ ಸಿಹಿ ತಿನಿಸುಗಳು ಸಹ ಕೆ.ಜಿಗಟ್ಟಲೆ ಇರ್ತಾ ಇತ್ತಂತೆ. ಸುಮಾರು 4.6 ಕೆಜಿ ಸಿಹಿ ಸೇವಿಸುತ್ತಿದ್ದನಂತೆ.
ಮಧ್ಯರಾತ್ರಿ ಸಹ ಹಸಿವಾಗುತ್ತಿತ್ತಂತೆ.‌ಆದ್ದರಿಂದ ಮಂಚದ ಎರಡೂ ಕಡೆಗಳಲ್ಲಿ ದೊಡ್ಡ ದೊಡ್ಡ ಪ್ಲೇಟ್ ಗಳಲ್ಲಿ ಸಮೋಸಾ ಇಡುತ್ತಿದ್ದರಂತೆ..!

LEAVE A REPLY

Please enter your comment!
Please enter your name here