ಕೆರೆಯಲ್ಲಿ ಈಜಲು ತೆರಳಿ ಅವಘಡ: ನೀರುಪಾಲಾದ ಇಬ್ಬರು ಬಾಲಕರು!
ಚಾಮರಾಜನಗರ:- ಜಿಲ್ಲೆಯ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಕೆರೆಯೊಂದರಲ್ಲಿ ಅವಘಡ ಸಂಭವಿಸಿದೆ. ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
13 ವರ್ಷದ ಅಭಯಗೌಡ, 14 ವರ್ಷದ ಕೃಷ್ಷಾಪುರದ ವೃಷಬೇಂದ್ರ ಮೃತರು. ಇವರು ಗುಂಬಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಬಾಲಕರಿಬ್ಬರು ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ವೃಷಬೇಂದ್ರ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಮತೋರ್ವ ಬಾಲಕ ಅಭಯ್‌ಗೌಡನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.