No menu items!
13.2 C
Munich
Saturday, May 30, 2026

ಪ್ರೀತಿಸುವಂತೆ ಪೀಡಿಸುತ್ತಿದ್ದವನು ಯುವತಿಗೆ ಚಾಕುವಿನಿಂದ ಹಲ್ಲೆ! ಆರೋಪಿ ಅರೆಸ್ಟ್

Must read

ಪ್ರೀತಿಸುವಂತೆ ಪೀಡಿಸುತ್ತಿದ್ದವನು ಯುವತಿಗೆ ಚಾಕುವಿನಿಂದ ಹಲ್ಲೆ! ಆರೋಪಿ ಅರೆಸ್ಟ್

ಬೆಂಗಳೂರು: ಪ್ರೀತಿಸುವಂತೆ ಪೀಡಿಸುತ್ತಿದ್ದ ಮನೆ ಮಾಲೀಕ ಯುವತಿ ಹಾಗೂ ಆತನ ಸ್ನೇಹಿತನ ಮೇಲೆ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನ ಬಸವೇಶ್ವರ ನಗರ ಕಮಲಾನಗರದಲ್ಲಿ ನಡೆದಿದೆ. ಶ್ರೀಕಾಂತ್ (45) ಬನಶಂಕರಿ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿಯಾಗಿದ್ದು,
ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಕಾಲೇಜು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಈ ಬಗ್ಗೆ ಯುವತಿಯು ಆತನ ಪತ್ನಿಗೆ ದೂರು ನೀಡಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಯುವತಿಯು ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಟೆಕ್ಕಿಯು ಕೋಪಗೊಂಡಿದ್ದ. ಕಳೆದ 3 ದಿನಗಳ ಹಿಂದೆ ಯುವತಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೇರೊಬ್ಬ ಯುವಕನೊಂದಿಗೆ ನಿಂತಿದ್ದಳು.
ಇದನ್ನೂ ಟೆಕ್ಕಿ ಗಮನಿಸಿದ್ದ. ಬೇರೊಬ್ಬ ಯುವಕನೊಂದಿಗೆ ಪ್ರೀತಿ ಇರುವುದಕ್ಕೆ ನಿರಾಕರಿಸುತ್ತಿದ್ದೀಯಾ ಎಂದು ಟೆಕ್ಕಿಯು ಯುವಕ ಯುವತಿಗೆ ಚಾಕು ಹಾಕಿದ್ದ. ನೊಂದ ಯುವತಿಯು ಟೆಕ್ಕಿಯ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಬನಶಂಕರಿ ಪೊಲೀಸರು ಕಾಮುಕ ಟೆಕ್ಕಿಯನ್ನು ಬಂಧನ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article