ಕೆಲಸ ಹುಡುಕುತ್ತಿರುವವರೇ, ಇಲ್ಲಿದೆ ಅವಕಾಶ ನೋಡಿ

0
44

ಕೊಪ್ಪಳ, ಜೂನ್ 17; ಕೊಪ್ಪಳ ಜಿಲ್ಲೆಯಲ್ಲಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು 7 ತಾಲೂಕಗಳ 122 ಗ್ರಾಮ ಪಂಚಾಯತಿಗಳಲ್ಲಿ ‘ಗ್ರಾಮ ಕಾಯಕ ಮಿತ್ರ’ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂನ್ 23ರ ಸಂಜೆ 4 ಗಂಟೆಯೊಳಗೆ ಆಯಾ ಗ್ರಾಮ ಪಂಚಾಯತಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 6 ಸಾವಿರ ರೂ. ಗಳನ್ನು ನಿಗದಿತ ಗೌರವ ಧನ ಹಾಗೂ ಕಾರ್ಯನಿರ್ವಹಣೆ ಆಧರಿಸಿ ರೂ. 5000 ಗಳನ್ನು ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ.

ಕೊಪ್ಪಳದ ಹಿರೇಬಗನಾಳ, ಕೋಳೂರು, ಗೊಂಡಬಾಳ, ಬಿಸರಳ್ಳಿ, ಬಹದ್ದೂರ ಬಂಡಿ, ಗುಳದಳ್ಳಿ, ಬೆಟಗೇರಿ ಹಾಗೂ ಕಲಕೇರಿ. ಗಂಗಾವತಿ ತಾಲ್ಲೂಕಿನ ಆನೆಗುಂದಿ, ಮಲ್ಲಾಪುರ ಮತ್ತು ವೆಂಕಟಗಿರಿ. ಕನಕಗಿರಿ ತಾಲ್ಲೂಕಿನ ಹಿರೇಖೇಡಾ, ಗೌರಿಪುರ ಹಾಗೂ ನವಲಿ. ಕುಷ್ಟಗಿ ತಾಲ್ಲೂಕಿನ ತುಗ್ಗಲದೋಣಿ, ಹನುಮನಾಳ, ಕ್ಯಾದಿಗುಪ್ಪಾ. ಕುಕನೂರು ತಾಲ್ಲೂಕಿನ ಬೆಣಕಲ್, ಮಂಗಳೂರು, ಶಿರೂರು, ಬಳಗೇರಿ. ಯಲಬುರ್ಗಾ ತಾಲ್ಲೂಕಿನ ಚಿಕ್ಕಮ್ಯಾಗೇರಿ, ಗೆದಗೇರಿ, ಹಿರೇಅರಳಿಹಳ್ಳಿ, ಮಾಟಲದಿನ್ನಿ, ಮುರಡಿ, ತುಮ್ಮರಗುದ್ದಿ ಹಾಗೂ ವಣಗೇರಿ ಗ್ರಾಮ ಪಂಚಾಯತಿಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಯು 2021ರ ಜನವರಿ 1 ಕ್ಕೆ ಅನ್ವಯಿಸುವಂತೆ ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್‌ಕಾರ್ಡ್ ಹೊಂದಿರಬೇಕು. ಕನಿಷ್ಟ 10ನೇ ತರಗತಿ ಉತ್ತಿರ್ಣರಾಗಿರುವ ಹಾಗೂ 2021 ರ ಜನವರಿ 1ಕ್ಕೆ ಅನ್ವಯಿಸುವಂತೆ 45 ವರ್ಷ ವಯೋಮಿತಿ ಮೀರಿರದ, ಕನ್ನಡ ಓದಲು ಮತ್ತು ಬರೆಯಲು ಬರುವ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ ಕನಿಷ್ಟ 2 ವರ್ಷ ಯೋಜನೆಯಡಿ ಅಕುಶಲ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರಬೇಕು. ಪರಿಣಾಮಕಾರಿ ಸಂವಹನ ಕೌಶಲ್ಯ , ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣ ಹೊಂದಿರಬೇಕು. ಗ್ರಾಮ ರೋಜ್‌ಗಾರ್ ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ದಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ರೋಜಗಾರ್ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.

 

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಕೊಪ್ಪಳ 9740584237, ಗಂಗಾವತಿ 9738834935, ಕನಕಗಿರಿ 8970118015, ಕುಷ್ಟಗಿ 8722424848, ಕುಕನೂರ 9743284330, ಯಲಬುರ್ಗಾ 8088169774 ಸಂಖ್ಯೆಗೆ ಕರೆ ಮಾಡಬಹುದು.

 

 

LEAVE A REPLY

Please enter your comment!
Please enter your name here