ಕೇಂದ್ರ ಬಜೆಟ್ ಮಂಡನೆ ಹಿನ್ನೆಲೆ ವಿಧಾನಸೌಧದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇವತ್ತು ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದೆ ದೇಶದ ಇತಿಹಾಸದಲ್ಲಿ ಇಂತಹ ನಿರುತ್ಸಾಹದ ಬಜೆಟ್ ನೋಡಿಲ್ಲ ಯಾವ ವರ್ಗಕ್ಕೂ ಸಹಾಯ ಮಾಡಿಲ್ಲ ವ್ಯಾಕ್ಸಿನ್ ಬಗ್ಗೆ ೩೬ ಸಾವಿರ ಕೋಟಿ ಹೇಳಿದ್ದಾರೆ,,
ಮೊದಲು ಪ್ರಧಾನಿ,ಸಂಸದರು ವ್ಯಾಕ್ಸಿನ್ ಪಡೆಯಬೇಕಿತ್ತು
ಆದರೆ ಪಡೆಯದೆ ಕೆಳಹಂತದವರನ್ನ ಅದಕ್ಕೆ ನೂಕಿದ್ದಾರೆ ಜನರ ವಿರುದ್ಧವಾದ ಬಜೆಟ್ ಇದಾಗಿದೆ ಯುವಕರಿಗೆ ಉದ್ಯೋಗದ ಬಗ್ಗೆ ಏನೂ ಫ್ಲಾನ್ ಇಲ್ಲ ರೈತರ ರಕ್ಷಣೆಯ ಬಗ್ಗೆಯೂ ಏನೂ ಇಲ್ಲ
ಬೆಲೆ ನಿಯಂತ್ರಣ,ರಕ್ಷಣೆ ಬಗ್ಗೆ ತಿಳಿಸಿಲ್ಲ ಹಾಗು ಸಣ್ಣಪುಟ್ಟ ರಸ್ತೆ ಬಗ್ಗೆ ಹೇಳಿದ್ದಾರೆ ಇನ್ನು ರೈಲುಗಳನ್ನ ಮಾರಾಟಕ್ಕಿಟ್ಟಿದ್ದಾರೆ ಪಬ್ಲಿಕ್ ಸೆಕ್ಟರ್ ಸಂಸ್ಥೆ ಮಾರಾಟಕ್ಕಿಟ್ಟಿದ್ದಾರೆ ಪೆಟ್ರೋಲ್,ಡಿಸೇಲ್ ಏರಿಕೆಯಾಗ್ತಿದೆ ಹೆಚ್ಚು ತೆರಿಗೆಯನ್ನ ಅವರು ಕಲೆಕ್ಟ್ ಮಾಡ್ತಿದ್ದಾರೆ ೨೦ ಲಕ್ಷ ಕೋಟಿ ಅನೌನ್ಸ್ ಮಾಡಿದ್ದರು ಅದು ಯಾರ್ಯಾರಿಗೆ ಸಿಕ್ಕಿದೆ ಗೊತ್ತಿಲ್ಲ ಸಾಮಾನ್ಯ ಜನರ ಮೇಲೆ ದೊಡ್ಡ ಬಾರ ಹಾಕಿದ್ದಾರೆ,ಈ ಬಜೆಟ್ ನಿಂದ ಯಾವ ಉತ್ಸಾಹವೂ ಇಲ್ಲ ನಿರುದ್ಯೋಗ,ಕಳ್ಳಕಾಕರಿಗೆ ಅವಕಾಶ ಮಾಡಿಕೊಡ್ತಿದ್ದಾರೆ ಎಂದು ಕೇಂದ್ರ ಬಜೆಟ್ ಬಗ್ಗೆ ಡಿಕೆಶಿ ಅಸಮಾಧಾನ ಹೊರಹಾಕಿದ್ರೆ ಇತ್ತ ಕೇಂದ್ರ ಬಜೆಟ್ ವಿಚಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ನಾವು ಹೆಚ್ಚೇನು ನಿರೀಕ್ಷೆ ಮಾಡೋಕೆ ಸಾಧ್ಯ? ವಿತ್ತ ಸಚಿವರು ಯಾರ ಸಲಹೆಗಳನ್ನೂ ಪಡೆಯಲ್ಲ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಪಡೆಯಲಿಲ್ಲ ಇವತ್ತು ಕೇಂದ್ರ ಬಜೆಟ್ ಮಂಡನೆಯಾಗಿದೆ ಆದರೆ ರಾಜ್ಯಕ್ಕೆ ಅವರ ಕೊಡುಗೆ ಏನೇನೂ ಇಲ್ಲ ಮೆಟ್ರೋಗೆ 14 ಸಾವಿರ ಕೋಟಿ ರೂ ಕೊಟ್ಟಿದ್ದಾರೆ.
ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ ಇದು ಸಂಪೂರ್ಣ ನಿರಾಶಾದಾಯಕ ಬಜೆಟ್ ಏರ್ ಇಂಡಿಯಾವನ್ನು ಖಾಸಗಿಯವರಿಗೆ ಕೊಟ್ಟಿದ್ದಾರೆ ಬಂಡವಾಳ ಶಾಹಿಗಳಿಗೆ ಪರವಾಗಿದ್ದಾರೆ ಜನಸಾಮಾನ್ಯರಿಗೆ ಯಾವ ಸಹಾಯವೂ ಇಲ್ಲ
ಬಿಜೆಪಿಯವರೇ ಇದ್ದರೆ ಇವತ್ತೂ ಸಿಗಲ್ಲ,ಮುಂದೆಯೂ ಸಿಗಲ್ಲ ಎಂದು
ಕೇಂದ್ರ ಬಜೆಟ್ ಬಗ್ಗೆ ರಾಮಲಿಂಗಾರೆಡ್ಡಿ ಆಕ್ರೋಶ ವೆಕ್ತಪಡಿಸಿದ್ದಾರೆ.