ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪ ಮಾಡಿದ್ದ ಎಂಬಿ ಪಾಟೀಲ್ ವಿರುದ್ಧ ಟ್ವೀಟ್ ಮಾಡಿ ಸಿಟಿ ರವಿ ಟಾಂಗ್ ನೀಡಿದ್ದಾರೆ.
ಲಿಂಗಾಯತ ಸಮುದಾಯಯಕ್ಕೆ ಸೇರಿದ ಸಂಸದ ಸುರೇಶ್ ಅಂಗಡಿ ಅವರಿಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸಚಿವ ಸ್ಥಾನ ನೀಡಿರುವುದಕ್ಕೆ ಪಾಟೀಲ್ ಅವರು ಕೇಂದ್ರ ಸರ್ಕಾರ ಲಿಂಗಾಯತರಿಗೆ ಮೋಸ ಮಾಡುತ್ತಿದೆ ಎಂದಿ ಅಸಮಾಧಾನ ಹೊರ ಹಾಕಿದ್ದರು.
ಬಹುಕಾಲದಿಂದಲೂ ಲಿಂಗಾಯತರ ನಾಯಕರಾದ ಬಿ ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಎಲ್ಲರೂ ಸಿದ್ದರಾಗಿದ್ದಾರೆ. ಲಿಂಗಾಯಯ ಸಮುದಾಯದ ಮೇಲೆ ಕಾಳಜಿ ಇರುವ ನೀವು ಏಕೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಯಡಿಯೂರಪ್ಪರನ್ನು ಸಿಎಂ ಮಾಡಬಾರದು ಎಂದು ಪ್ರಶ್ನಿಸುವ ಮೂಲಕ ಕಾಲೆಳೆದಿದ್ದಾರೆ,