ಮಾಧ್ಯಮದವರೊಡನೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಕರ್ನಾಟಕ ಪಾಲಿಗೆ ಇವತ್ತು ಸುದೀನ ಗಾಂಧಿಯವರ ಕನಸು, ಭಾರತ ಇಡೀ ಪ್ರಪಂಚಕ್ಕೆ ಸಂದೇಶ ನೀಡಬೇಕು ಅನೋ ಕನಸು ನನಸಾಗಿದೆ ಬಿಲ್ ಗೆ ಪ್ರತಿ ಭಾರಿ ಅಡ್ಡಿಪಡಿಸುತ್ತಿದ್ರು.. ರಾಜಕೀಯ ಮಾಡಿ ಯಾವುದೋ ಒಂದು ಸಮುದಾಯಕ್ಕೆ ಸಂದೇಶ ಕೊಡುವ ಕೆಲಸ ಮಾಡುತ್ತಿದ್ರು. ಕಾಂಗ್ರೆಸ್ ನವ್ರು ಇದಕ್ಕೆ ಸಪೋರ್ಟ್ ಮಾಡ್ಬೇಕಿತ್ತು. ಹಿಂದೆ ಅವರ ಪಕ್ಷದ ಗುರುತು ಪಶು ಕರು ಇತ್ತು. ಅದನ್ನೇ ಅವರು ಮರೆತಿದ್ದಾರೆ ಈ ಕೈ ಗುರುತಿನಿಂದ ಕೊಲೆ ಮಾಡುತ್ತಿದ್ದಾರೆ. ಈ ಕೈ ಗುರುತಿನಿಂದ ಕೊಲೆ ಮಾಡ್ಬೇಡಿ ಅಂತ ತೆಡೆದಿದ್ದೇವೆ ಹಿಂದು ಸಮುದಾಯ ಖುಷಿಯಾಗಿದೆ.
ಪ್ರಭು ಚೌಹ್ವಾನ್ ಮಂಡನೆ ಮಾಡಿದ ಬಿಲ್ ಸ್ಪಷ್ಟವಾಗಿದೆ ಇವತ್ತು ನಾವು ಪುಣ್ಯರಾಗಿದ್ದೇವೆ ಗೋ ಹತ್ಯೆ ಆಗ್ಬೇಕು ಅಂತ ಅವರು ಮತ ಬ್ಯಾಂಕ್ ಮಾಡ್ತಿದ್ದಾರೆ. ಮಹತ್ಮಾ ಗಾಂಧಿಯವ್ರ ಕನಸನ್ನ ನನಸು ಮಾಡಿದ್ದೇವೆ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.