ಕೊತ್ತಂಬರಿ ಕಾಳಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ..!
ಎಲ್ಲರ ಅಡುಗೆ ಮನೆಯಲ್ಲೂ ಕೊತ್ತಂಬರಿ ಪುಡಿಯನ್ನು ಮಸಾಲ ಪದಾರ್ಥವಾಗಿ ಬಳಸುತ್ತೇವೆ. ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳ ಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಪ್ರತಿದಿನ ಕೊತ್ತಂಬರಿ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಸಹಕಾರಿಯಾಗಿದೆ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ.
ಅಜೀರ್ಣ ಸಮಸ್ಯೆಗೆ ಪರಿಹಾರ ಹೆಚ್ಚಿನ ಜನರು ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಅಜೀರ್ಣದಿಂದ ಬಳಲುತ್ತಿರುತ್ತಾರೆ. ಕೊತ್ತಂಬರಿ ಕಾಳು ಇಂತಹ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ನೀರಿಗೆ ಕೊತ್ತಂಬರಿ ಪುಡಿ ಮತ್ತು ಉಪ್ಪು ಬೆರೆಸಿ ಸೇವಿಸಿ. ಹೀಗೆ ಪ್ರತಿದಿನ ಒಂದು ಚಮಚೆ ಸೇವಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ.
ನಿದ್ರಾಹೀನತೆಗೆ ಮುಕ್ತಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಕೊತ್ತಂಬರಿ ಕಷಾಯವನ್ನು ಸೇವಿಸಿ. ಕೊತ್ತಂಬರಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ನಿದ್ರೆ ಇಲ್ಲದೆ ತೊಂದರೆಗೀಡಾಗುವ ಸಮಸ್ಯೆ ದೂರವಾಗುತ್ತದೆ.
ಕೀಲು ನೋವು ನಿವಾರಕ ಕೊತ್ತಂಬರಿ, ಜೀರಿಗೆ, ಬೆಲ್ಲವನ್ನು ಒಟ್ಟಿಗೆ ಬೆರೆಸಿ, ಸಣ್ಣ ಉಂಡೆಗಳನ್ನಾಗಿ ಮಾಡಿ ಪ್ರತಿ ದಿನ ಸೇವಿಸುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ. ವಯಸ್ಸಾದವರು ಈ ಅಭ್ಯಾಸವನ್ನು ಮಾಡಿಕೊಂಡರೆ ಆಗಾಗ ಬರುವ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.
ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಪ್ರತಿದಿನ ಗರ್ಭಿಣಿ ಮಹಿಳೆಯರು ತಮ್ಮ ಆಹಾರದಲ್ಲಿ ಕೊತ್ತಂಬರಿ ಸೇವಿಸುವುದರಿಂದ ಗರ್ಭಾಶಯಕ್ಕೆ ತುಂಬಾ ಒಳ್ಳೆಯದು,. ಅದರಲ್ಲೂ ವಿಶೇಷವಾಗಿ ಹೆರಿಗೆಯ ಸಮಯದಲ್ಲಿ ಹೆಚ್ಚು ಶಕ್ತಿ ನೀಡುತ್ತದೆ. ಮಹಿಳೆಯರ ಆರೋಗ್ಯದಲ್ಲಾಗುವ ಅನೇಕ ಬದಲಾವಣೆಗೂ ಕೊತ್ತಂಬರಿ ಸೇವಿಸುವುದು ಉತ್ತಮ.
ಮಲಬದ್ಧತೆ ಕಡಿಮೆ ಮಾಡುತ್ತದೆ ಅಜೀರ್ಣ, ಅತಿಸಾರ ಮತ್ತು ಮಲಬದ್ಧತೆಯಿಂದ ಬಳುತ್ತಿರುವವರು, ಕೊತ್ತಂಬರಿಯನ್ನು ಸೇವಿಸಿ. ತೊಳೆದ ಕೊತ್ತಂಬರಿ ಕಾಳನ್ನು ಹುರಿದು, ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಹೀಗೆ ಮಾಡಿಟ್ಟುಕೊಂಡ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ.
ತಲೆನೋವು ನಿವಾರಕ ಮಜ್ಜಿಗೆ ಮತ್ತು ಕೊತ್ತಂಬರಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದರ ಜತೆಗೆ ವಾಕರಿಕೆ ಬಂದಂತೆ ಆಗುವುದು, ಹೊಟ್ಟೆಯಲ್ಲಿ ಉರಿಯೂತ, ಹೊಟ್ಟೆ ನೋವು, ತಲೆನೋವು ಕಡಿಮೆಯಾಗುತ್ತದೆ.
ಕೆಮ್ಮಿಗೆ ಪರಿಹಾರ ಕೊತ್ತಂಬರಿಯನ್ನು ಅಕ್ಕಿ ತೊಳೆದ ನೀರಿನಿಂದ ಪುಡಿಮಾಡಿ ಸೇವಿಸುವುದರಿಂದ ಮಕ್ಕಳಲ್ಲಿ ಆಗಾಗ್ಗೆ ಉಂಟಾಗುವ ಕೆಮ್ಮು ಕಡಿಮೆಯಾಗುತ್ತದೆ. ಜತೆಗೆ ಆಯಾಸದಂತಹ ಸಮಸ್ಯೆಯೂ ದೂರವಾಗುತ್ತದೆ.