ಇದುವರೆಗಿನ ಟ್ರೆಂಡಿಂಗ್ ಪ್ರಕಾರ ಒಂಬತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯಸುತ್ತಿದೆ, ಆಂಧ್ರಪ್ರದೇಶ, ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಮಣಿಪುರ, ಒರಿಸ್ಸಾ, ರಾಜಸ್ಥಾನ, ತ್ರಿಪುರಾ, ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಯಾವ ಕ್ಷೇತ್ರಗಳಲ್ಲೂ ಜಯಸಾಧಿಸಲಿಲ್ಲ ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಅಭೂತಪೂರ್ವ ಜಯದತ್ತ ಸಾಗುತ್ತಿದ್ದರೆ,
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. 25ಕ್ಷೇತ್ರಗಳಲ್ಲಿ ಟಿಎಂಸಿ, 16 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 1ಕ್ಷೇತ್ರದಲ್ಲಿ ಇತರರು ಮುಂದಿದ್ದರೆ ಗುಜರಾತ್ ಹಾಗೂ ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಬಾರಿಯ ಚುನಾವಣೆಯಂತೆ ಈ ಬಾರಿಯೂ ಕ್ಲೀನ್ ಸ್ವೀಪ್ ಮಾಡುವ ಎಲ್ಲಾ ಸಾಧ್ಯತೆಯಿದೆ ಅಲ್ಲದೆ ರಾಜಸ್ಥಾನದ ಎಲ್ಲಾ 25ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದ್ದು, ಜಯದತ್ತ ದಾಪುಗಾಲು ಹಾಕುತ್ತಿದೆ.