ಕೊರೊನಾ ಗೆದ್ದ ಮೈಕ್ ಹಸ್ಸಿ

Date:

ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಕಾಶಿ ವಿಶ್ವನಾಥನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ವಿಷಯವನ್ನು ತಿಳಿಸಿದ್ದಾರೆ.

ಪ್ರಸ್ತುತ ಐಪಿಎಲ್ ಟೂರ್ನಿಯ ಬಯೋಬಬಲ್ ಒಳಗಡೆ ಕೊರೊನಾ ಸೊಂಕು ಪ್ರವೇಶಿಸಿದ ನಂತರ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಮುಂದೂಡಲಾಯಿತು. ಈ ಸಂದರ್ಭದಲ್ಲಿ ಕೆಲ ಆಟಗಾರರ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಅವರಿಗೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಮೈಕ್ ಹಸ್ಸಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸದೇ ಭಾರತದಲ್ಲಿಯೇ ಚಿಕಿತ್ಸೆಯನ್ನು ಪಡೆಯುತ್ತಾ ಐಸೋಲೇಷನ್‌ಗೆ ಒಳಗಾಗಿದ್ದರು.

 

 

ಕೆಲ ದಿನಗಳ ನಂತರ ಮೈಕ್ ಹಸ್ಸಿ ಕೊರೊನಾ ವರದಿ ನೆಗೆಟಿವ್ ಬಂದ ಕಾರಣ ತವರಿಗೆ ಹಿಂತಿರುಗುವ ಖುಷಿಯಲ್ಲಿದ್ದರು. ಆದರೆ ಮಾರ್ಚ್ 11ರಂದು ನಡೆದ ಎರಡನೇ ಸುತ್ತಿನ ಪರೀಕ್ಷೆಯಲ್ಲಿ ಮತ್ತೆ ಮೈಕ್ ಹಸ್ಸಿ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಹೀಗಾಗಿ ಮೈಕ್ ಹಸ್ಸಿ ಮತ್ತೊಂದಷ್ಟು ದಿನ ಭಾರತದಲ್ಲಿಯೇ ಇದ್ದು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಇದೀಗ ಶುಕ್ರವಾರ ( ಮೇ 14 ) ಮೈಕ್ ಹಸ್ಸಿಗೆ ಕೊರೊನಾ ನೆಗೆಟಿವ್ ವರದಿ ಬಂದು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು ಆದಷ್ಟು ಬೇಗ ಮಾಲ್ಡೀವ್ಸ್ ಅಥವಾ ಆಸ್ಟ್ರೇಲಿಯಾಗೆ ಪ್ರಯಾಣವನ್ನು ಬೆಳೆಸಲಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ

ಬೆಂಗಳೂರು ಬೇಗೂರಿನ ಬಳಿ ಅಗ್ನಿ ಅವಘಡ: ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿಬೆಂಗಳೂರು: ನಗರದ...

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ ಸಿಸಿಬಿಗೆ ದೂರು

ನಟಿ ಕಾರುಣ್ಯ ರಾಮ್ ಗೆ ಶುರುವಾಯ್ತು ಸಾಲಗಾರರ ಕಾಟ: ತಂಗಿ ವಿರುದ್ಧ...

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ ಕಷ್ಟ ತಪ್ಪಿದ್ದಲ್ಲ!

ಇಂದು ಮಕರ ಸಂಕ್ರಾಂತಿ ಸಂಭ್ರಮ: ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ, ವರ್ಷವಿಡೀ...

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...