ಗೋವಾ ಟ್ರಿಪ್ ; ಪೊಲೀಸರಿಗೆ ಸಿಕ್ಕಿಬಿದ್ದ ಪೃಥ್ವಿ ಶಾ!

0
58

ಇತ್ತೀಚೆಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಸೇರಿದಂತೆ ಇಂಗ್ಲೆಂಡ್ ನೆಲದಲ್ಲಿ ನಡೆಯುವ 6 ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿತು. ಆದರೆ ಯುವ ಆಟಗಾರ ಪೃಥ್ವಿ ಶಾ ಈ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾಗೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಬೇಕೆಂದರೆ ಮುಂದಿನ ದಿನಗಳಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳಬೇಕೆಂದು ಟೀಮ್ ಇಂಡಿಯಾ ಆಯ್ಕೆ ಸಮಿತಿ ಪೃಥ್ವಿ ಶಾಗೆ ಸಲಹೆಯನ್ನು ನೀಡಿತ್ತು.

 

 

 

ಇದಾದ ಬಳಿಕ ಮತ್ತೊಮ್ಮೆ ಪೃಥ್ವಿ ಶಾ ಸುದ್ದಿಯಲ್ಲಿದ್ದಾರೆ. ಸ್ನೇಹಿತರ ಜತೆಗೂಡಿ ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ಪೃಥ್ವಿ ಶಾ ಅವರನ್ನು ಅಂಬೋಲಿಯಲ್ಲಿ ಪೊಲೀಸರು ತಡೆದಿದ್ದಾರೆ. ದೇಶದಾದ್ಯಂತ ಕೊವಿಡ್ ಲಾಕ್‌ಡೌನ್ ಇರುವ ಕಾರಣ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡಬೇಕೆಂದರೆ ಕಡ್ಡಾಯವಾಗಿ ಇ-ಪಾಸ್ ಹೊಂದಿರಲೇಬೇಕು. ಆದರೆ ಪೃಥ್ವಿ ಶಾ ಬಳಿ ಇ – ಪಾಸ್ ಇರಲಿಲ್ಲ, ಹೀಗಾಗಿ ಪೊಲೀಸರು ಪೃಥ್ವಿ ಶಾ ಮತ್ತು ಸ್ನೇಹಿತರನ್ನು ಗೋವಾ ರಾಜ್ಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದಾರೆ. ನಂತರ ತನ್ನ ಮೊಬೈಲ್ ಮೂಲಕ ಇ – ಪಾಸ್‌ಗೆ ಅರ್ಜಿ ಸಲ್ಲಿಸಿದ ಪೃಥ್ವಿ ಶಾ ಕೇವಲ ಒಂದು ಗಂಟೆಯೊಳಗೆ ಇ-ಪಾಸ್ ಪಡೆದುಕೊಂಡು ಗೋವಾಕ್ಕೆ ಪ್ರವೇಶ ಮಾಡಿದ್ದಾರೆ.

 

ಇನ್ನು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ್ದ ಪೃಥ್ವಿ ಶಾ 308 ರನ್ ಬಾರಿಸಿ ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಇಂಗ್ಲೆಂಡ್‌ನಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿರುವ ಪೃಥ್ವಿ ಶಾ ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಸರಣಿಗಳಿಗೆ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

 

LEAVE A REPLY

Please enter your comment!
Please enter your name here