ಕೊರೊನಾ ಬಗ್ಗೆ ಭಯ ಬೇಡ.. ಮನೆಯಲ್ಲೇ ಇದೆ ಇಮ್ಯುನಿಟಿ ಹೆಚ್ಚಿಸುವ ಆಹಾರ..

Date:

ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸಾಂಕ್ರಾಮಿಕಕ್ಕೆ ಯಾವುದೇ ‌ಮದ್ದಿಲ್ಲ.‌ ಸಾಮಾಜಿಕ ಅಂತರ‌, ಮಾಸ್ಕ್ ಬಳಕೆ‌, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕಿರುವ ಸರಳ ಮಾರ್ಗ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರದ ಬಳಕೆ ಹೆಚ್ಚಾಗುತ್ತಿದೆ‌.

ಇತ್ತೀಚಿಗೆ ಜನ ಕೊರೊನಾ ವೈರಾಣುವಿನ ವಿರುದ್ಧ ಹೋರಾಡಲು, ರೋಗ ನಿರೋಧಕ ‌ಶಕ್ತಿ ಹೆಚ್ಚಿಸಿಕೊಳ್ಳಲು ವಿಟಮಿನ್‌ ಸಿ ಸೇರಿದಂತೆ ‌ಹಲವು ಮಾತ್ರೆಗಳ ಬಳಕೆ ಮಾಡಲು ಮುಂದಾಗಿದ್ದಾರೆ‌. ಆದರೆ ನಮ್ಮ ಮನೆಯಲ್ಲೇ ಇರುವ ಬಹುತೇಕ ಆಹಾರ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳಿವೆ. ನಾವು ಅಡುಗೆ ಮನೆಯಲ್ಲಿ ಪ್ರತಿನಿತ್ಯ ಬಳಸುವ ಅರಿಶಿನ, ಮೆಣಸು, ಚೆಕ್ಕೆ,ಲವಂಗ, ಶುಂಠಿ ಹೀಗೆ ಬಹುತೇಕ ಪದಾರ್ಥಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣಗಳಿವೆ. ಅವುಗಳ‌ ಹೆಚ್ಚಿನ ಬಳಕೆಯಿಂದಲೇ ಕೊರೊನಾ‌ ‌ವೈರಾಣು ನಿಯಂತ್ರಿಸಬಹುದು.ಹೌದು, ಈಗ ಎಲ್ಲೆಲ್ಲೂ ಒಂದೇ ಮಾತು ಇಮ್ಯುನಿಟಿ ಪವರ್‌ ಅರ್ಥಾತ್‌ ರೋಗ ನಿರೋಧಕ ಗುಣ ಹೆಚ್ಚಿಸಿಕೊಳ್ಳೋದು. ಇದಕ್ಕಾಗಿ ಜನ ಶುಂಠಿ ಕಷಾಯ, ಮೆಣಸಿನ ಕಷಾಯ, ಅರಿಶಿನ ಹಾಲು, ಸೊಗದ ಬೇರಿನ ಷರಭತ್ತು, ಒಂದೇ ಎರಡೇ… ದಿನಕ್ಕೊಂದು ಬಗೆಯ ಇಮ್ಯುನಿಟಿ‌ ಬೂಸ್ಟ್ ಮಾಡುವ ಆಹಾರದ ಬಗೆಯೇ ಚರ್ಚೆ ನಡೆಯುತ್ತಿದೆ. ಜನ ದಿನವೂ ಕಷಾಯವನ್ನು ಕುಡಿಯುವುದರಲ್ಲಿ ನಿರತರಾಗಿ ಸೇವನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಹಣ್ಣುಗಳ‌‌ನ್ನು ಹೆಚ್ಚಾಗಿ ಸೇವಿಸಿದರೆ, ಕೊರೊನಾ ಮಾತ್ರವಲ್ಲ, ಯಾ ರೋಗಗಳು ‌ನಮ್ಮ ಬಳಿ ಸುಳಿಯುವುದಿಲ್ಲ.ನಮ್ಮ ದೇಹದಲ್ಲಿ ರೋಗನಿರೋಧಕ ಗುಣ ಹೆಚ್ಚಿಸುವಲ್ಲಿ ಹಣ್ಣುಗಳ ಪಾತ್ರ ಕೂಡ ದೊಡ್ಡದು. ಅದರಲ್ಲೂ ಸಿಟ್ರಸ್‌ ಅಂಶ ಇರುವ ಹಣ್ಣುಗಳನ್ನು ತಿಂದರೆ, ಅನಾರೋಗ್ಯ ಅನ್ನೋದು ಓಡಿ ಹೋಗುತ್ತದೆ.

ಒಂದು ಸಂಗತಿ ಗೊತ್ತಾ‌ ಏನಂದರೆ, ದೇಹದಲ್ಲಿ ವಿಟಮಿನ್‌ ಸಿ ಕೊರತೆ ಆದಾಗಲೇ ನಮಗೆ ಕೆಮ್ಮು, ನೆಗಡಿ, ಗಂಟಲ ಕೆರೆತ ಬರುವುದು ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿ ಸಿಟ್ರಸ್ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ನಿಂಬೆ ಹಣ್ಣು, ಹುಣಸೆ, ಟೊಮೆಟೊ ಇದ್ದರೆ ಸಾಕು. ಇದರ ಬಳಕೆಯಿಂದ ದೇಹಕ್ಕೆ ಸಿಟ್ರಸ್‌ ಅಂಶ ಸೇರುತ್ತದೆ.

ಬೆಳಗ್ಗೆ ಎದ್ದು ಒಂದು ಕೆಲಸ ಮಾಡಿ, ಬಿಸಿನೀರಿಗೆ ನಿಂಬೆ ರಸ ಸೇರಿಸಿ ಕುಡಿದು ನೋಡಿ. ಅಡುಗೆ ಮತ್ತು ತಿಂಡಿಯಲ್ಲಿ ಸಾಧ್ಯವಾದಷ್ಟು ನಿಂಬೆ ಬಳಸಿ. ಇಷ್ಟು ಮಾಡಿದರೆ, ವೈರಾಣುಗಳು ನಿಮ್ಮ ಬಳಿ ಸುಳಿಯಲಾರವು. ಇನ್ನೊಂದು ವಿಚಾರ, ಜೀರ್ಣ ಕ್ರಿಯೆ ಚೆನ್ನಾಗಿ ಆದರೆ, ಯಾವ ರೋಗವೂ ದೇಹ ಹೊಕ್ಕುವುದಿಲ್ಲ. ಹಾಗಾಗಿ, ಹೊಟ್ಟೆ ಸಮಸ್ಯೆ ಕಡಿಮೆ ಮಾಡಲು ಮೊಸರು, ಮಜ್ಜಿಗೆ ಕುಡಿಯಿರಿ.

ಟಲು ಉರಿ, ಕೆರೆತ ಇವನ್ನೆಲ್ಲ ಕಡಿಮೆ ಮಾಡುವ ಗುಣ ಬೆಳ್ಳುಳ್ಳಿಗೆ ಇದೆ. ಕಾರಣ, ಬೆಳ್ಳುಳ್ಳಿಯಲ್ಲಿ ಅಲಿಸಿನ್‌ ಅಂಶ ಇರುವುದು. ಶುಂಠಿ ರಸದೊಂದಿಗೆ ಸ್ವಲ್ಪ ಕರಿಮೆಣಸು ಸೇರಿಸಿ ಕುಡಿದರೆ ಗಂಟಲು ಕೆರೆತ ಮಾಯವಾಗುತ್ತದೆ. ಪಾಲಕ್‌ ಸೊಪ್ಪಿನಲ್ಲಿ ವಿಟಮಿನ್‌ ಸಿ ಮಾತ್ರವಲ್ಲ, ಆಂಟಿ ಆಕ್ಸಿಡೆಂಟ್‌ ಗುಣವೂ ಹೆಚ್ಚಿದೆ. ಹೀಗಾಗಿ, ಪಾಲಾಕ್‌ ಜ್ಯೂಸ್‌ ಕುಡಿದರೆ ರೋಗ ನಿರೋಧಕ ಗುಣ ಹೆಚ್ಚುತ್ತದೆ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...