ಕೊರೊನಾ 3ನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತೆ ಎನ್ನುವುದೇ ಸುಳ್ಳು ಎಂದ ಅಧ್ಯಯನ

0
41

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಬಹುದಾದ ಸಾಧ್ಯತೆಯನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬ್ರಿಟನ್‌ನಲ್ಲಿ ಅಧ್ಯಯನ ನಡೆಸಲಾಗಿದ್ದು, ಕೊರೊನಾ ಸೋಂಕಿನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಹಾಗೂ ಸಾವು ಸಂಭವಿಸುವ ಸಾಧ್ಯತೆ ಮಕ್ಕಳಲ್ಲಿ ತೀರಾ ಕಡಿಮೆ ಎಂದು ಈ ಅಧ್ಯಯನ ವರದಿ ತಿಳಿಸಿದೆ.
ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್), ಯುನಿವರ್ಸಿಟಿ ಆಫ್ ಬ್ರಿಸ್ಟಾಲ್, ಯೂನಿವರ್ಸಿಟಿ ಆಫ್ ಯಾರ್ಕ್, ಯೂನಿವರ್ಸಿಟಿ ಆಫ್ ಲಿವರ್ ಪೂಲ್‌ನ ಸಂಶೋಧಕರು ಈ ಬಗ್ಗೆ ಅಧ್ಯಯನ ಕೈಗೊಂಡಿದ್ದು, ಮಕ್ಕಳಿಗೆ ಕೊರೊನಾ ಸೋಂಕಿನಿಂದ ಅಪಾಯದ ಸಾಧ್ಯತೆ ಅತಿ ಕಡಿಮೆ ಎಂದು ತಿಳಿಸಿದ್ದಾರೆ.


ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಯುವಜನತೆ ಕೊರೊನಾ ಸೋಂಕಿನಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದೂ ಸಂಶೋಧನೆ ತಿಳಿಸಿದೆ. “ಮಧುಮೇಹ, ಅಸ್ತಮಾ, ಹೃದಯದ ಸಮಸ್ಯೆ ಇರುವ ಯುವಜನತೆ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು” ಎಂದು ಯುಸಿಎಲ್‌ನ ಜೋಸೆಫ್ ವರ್ಡ್ ತಿಳಿಸಿದ್ದಾರೆ.
ಬ್ರಿಟನ್‌ನ ಲಸಿಕಾ ಜಂಟಿ ಸಮಿತಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗೆ ಈ ಸಂಶೋಧನೆಯ ಪ್ರಾಥಮಿಕ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ.


ಬ್ರಿಟನ್‌ನಲ್ಲಿ ಕಳೆದ 12 ತಿಂಗಳ ಕೊರೊನಾ ಪ್ರಕರಣಗಳ ವಿಶ್ಲೇಷಣೆ ನಡೆಸಿ ಈ ಫಲಿತಾಂಶ ಕಂಡುಕೊಳ್ಳಲಾಗಿದೆ. 12 ಮಿಲಿಯನ್ ಮಕ್ಕಳಲ್ಲಿ 25 ಮಕ್ಕಳು ಸೋಂಕಿನಿಂದ ಸಾವನ್ನಪ್ಪಿದ್ದು, ಮರಣ ಪ್ರಮಾಣ 2% ಇದೆ ಎಂದು ಸಂಶೋಧನೆ ತಿಳಿಸಿದೆ.

LEAVE A REPLY

Please enter your comment!
Please enter your name here