ಕೊರೋನಾದಿಂದ ಇಡೀ ವಿಶ್ವ ನಲುಗಿದೆ. ಜನ ಗೃಹಬಂಧನ ವಿಧಿಸಿಕೊಂಡಿದ್ದಾರೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲ್ಯಾಪ್ಟಾಪ್ಗಳನ್ನು ನೀಡಿ ಮನೇಲೇ ಕುಳಿತು ಕೆಲಸ ಮಾಡಿ ಅಂದಿವೆ.. ಕೆಲವು ಪರೀಕ್ಷೆಗಳು ಹೊರತು ಪಡಿಸಿ ಬಹುತೇಕ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಪುಟ್ಟ ಪುಟ್ಟ ಮಕ್ಕಳನ್ನು ಪರೀಕ್ಷೆ ನಡೆಸದೆ ಮುಂದಿನ ತರಗತಿಗೆ ತೇರ್ಗಡೆ ಮಾಡಿ ಈಗಾಗಲೇ ಸುಧೀರ್ಘ ರಜೆ ಘೋಷಿಸಲಾಗಿದೆ.
ಮಾಲ್ಗಳು, ಥಿಯೇಟರ್ಗಳು ಇಲ್ಲದೆ ನಗರ ಪ್ರದೇಶಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಕೊರೋನಾ ಆರ್ಥಿಕತೆಗೆ ಬಹುದೊಡ್ಡ ಮಟ್ಟಿನ ಹೊಡೆತ ನೀಡಿದೆ. ಆ ಬಿಸಿ ನಮ್ಮ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ಒಂದಿಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಫಿಲ್ಮ್ ಚೇಂಬರ್ನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ಆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಕೊರೋನಾ ವೈರಸ್ ಹಬ್ಬುವಿಕೆ ತಡೆಗಟ್ಟುವ ಉದ್ದೇಶದಿಂದ ಮಾರ್ಚ್ 22ರವರೆಗೆ ಬಂದ್ ಮಾಡಲಾಗಿತ್ತು. ಈಗ ಮಾರ್ಚ್ 31ರವರೆಗೆ ಚಿತ್ರ ಪ್ರದರ್ಶನವನ್ನು ಬಂದ್ ಮಾಡಲಾಗಿದೆ. ಬಂದ್ಗೂ ಮುನ್ನ ಯಾವ ಸಿನಿಮಾಗಳೆಲ್ಲಾ ಪ್ರದರ್ಶನಕಾಣುತ್ತಿದ್ದವೋ ಬಂದ್ ತೆರವಿನ ನಂತರ ಆ ಸಿನಿಮಾಗಳಿಗೇ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ. ಚಿತ್ರೀಕರಣ ನಡೆಸುವವರಿಗೆ ಮುಂಜಾಗೃತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರೀಕರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಬೇಕು. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಿರುವ ಚಿತ್ರಗಳು ಗೊಂದಲವಿಲ್ಲದೆ ಡೇಟ್ ಅನೌನ್ಸ್ ಮಾಡಬೇಕು ಎಂದರು.
ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಬಂದ್ನಿಂದ ಚಿತ್ರರಂಗಕ್ಕಾದ ನಷ್ಟವನ್ನು ವಿವರಿಸಿದ್ರು. ಬಂದ್ನಿಂದ ಸ್ಯಾಂಡಲ್ವುಡ್ಗೆ ಸುಮಾರು 30 ರಿಂದ 40 ಕೋಟಿ ರೂ ಅಷ್ಟು ನಷ್ಟವಾಗುತ್ತಿದೆ. ಬೇರೆ ಭಾಷೆಗಳ ಸಿನಿಮಾಗಳೂ ಸೇರಿಸದಂತೆ 80 ರಿಂದ 100 ಕೋಟಿ ರೂ ನಷ್ಟವಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ಬಂದ್ನಿಂದ ಸ್ಯಾಂಡಲ್ವುಡ್ ಗಾದ ನಷ್ಟ ಕೇಳಿದ್ರೆ ತಲೆ ತಿರುಗುತ್ತೆ!
Date: