ಕೊವಿಡ್ ಲಸಿಕೆ ಯಾವ ಮಹಾ ಎಂದವರು ಐಸಿಯು ಪಾಲು

0
31

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಆಘಾತಕಾರಿ ಅಂಕಿ-ಅಂಶವೊಂದನ್ನು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಹೊರ ಹಾಕಿದೆ.

ಕಳೆದ 14 ದಿನಗಳಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಾಗಿರುವ ಕೊರೊನಾ ಸಂಬಂಧಿತ ರೋಗಿಗಳ ಪೈಕಿ ಕೊರೊನಾವೈರಸ್ ಲಸಿಕೆಯನ್ನೇ ಹಾಕಿಸಿಕೊಳ್ಳದವರು ಅಥವಾ ಒಂದು ಡೋಸ್ ಮಾತ್ರ ಹಾಕಿಸಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಹೆಚ್ಚು ಅವಲಂಬಿತ ಘಟಕ(High Dependency Units)ಗಳಲ್ಲಿ ಶೇ.75ರಷ್ಟು ಜನರು ಮತ್ತು ತುರ್ತು ನಿಗಾ ಘಟಕ(Intensive Care Units)ಗಳಲ್ಲಿ ಇರುವ ರೋಗಿಗಳ ಪೈಕಿ ಶೇ.78.5ರಷ್ಟು ಮಂದಿ ಲಸಿಕೆಯ ಬಗ್ಗೆ ತಾತ್ಸಾರ ಮಾಡಿದವರೇ ಇದ್ದಾರೆ ಎಂದು ವರದಿ ಹೇಳಿದೆ.

ಹೆಚ್ಚು ಅವಲಂಬಿತ ಘಟಕದಲ್ಲಿ ದಾಖಲಾದ ಒಟ್ಟು 57 ಜನರ ಪೈಕಿ 43 ಜನರು ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳವರು ಅಥವಾ ಒಂದು ಡೋಸ್ ಲಸಿಕೆ ಪಡೆದುಕೊಂಡವರೇ ಆಗಿದ್ದಾರೆ. ಅದೇ ರೀತಿ ತುರ್ತು ನಿಗಾ ಘಟಕದಲ್ಲಿ ದಾಖಲಾದ 51 ರೋಗಿಗಳಲ್ಲಿ 40 ಜನರು ಲಸಿಕೆ ಪಡೆದುಕೊಳ್ಳದ ಅಥವಾ ಭಾಗಶಃ ಲಸಿಕೆ ಪಡೆದುಕೊಂಡವರು ಆಗಿದ್ದಾರೆ.

 

 

LEAVE A REPLY

Please enter your comment!
Please enter your name here