ಕೊವಿಡ್ ಹೋದ್ರೂ ಈ ಸಮಸ್ಯೆಗಳು ಹೋಗಲ್ಲ!

0
28

ಕೊರೊನಾ ವೈರಸ್‌ ಸೋಂಕು ಬಂದ ಒಂದು ವರ್ಷದ ಬಳಿಕವೂ ಆಯಾಸ ಹಾಗೂ ಉಸಿರಾಟದ ತೊಂದರೆಯು ಹಲವಾರು ಕೋವಿಡ್‌ ಸೋಂಕಿತರಲ್ಲಿ ಇರುತ್ತದೆ ಎಂದು ಕೊರೊನಾ ವೈರಸ್‌ ಸೋಂಕಿನ ಬಗ್ಗೆ ಇತ್ತೀಚಿಗೆ ನಡೆಸಲಾದ ಚೀನಾದ ಅಧ್ಯಯನ ವರದಿಯೊಂದು ಹೇಳಿದೆ. ಈ ಅಧ್ಯಯನವು ಕೊರೊನಾ ವೈರಸ್‌ ಸೋಂಕಿನ ದೀರ್ಘಾವಧಿ ಆರೋಗ್ಯ ಸಮಸ್ಯೆಯ ಬಗ್ಗೆ ನಡೆಸಲಾದ ಅಧ್ಯಯನವಾಗಿದೆ. ಈ ಅಧ್ಯಯನವನ್ನು ಬ್ರಿಟಿಷ್‌ ಮೆಡಿಕಲ್‌ ಜರ್ನಲ್‌, ದಿ ಲ್ಯಾನ್ಸೆಟ್ ಶುಕ್ರವಾರ ಪ್ರಕಟ ಮಾಡಿದೆ.

ಕೊರೊನಾ ವೈರಸ್‌ ಸೋಂಕು ಹೆಚ್ಚಳವಾಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾದ ಕೋವಿಡ್ ಸೋಂಕಿತರ ಪೈಕಿ ಅರ್ಧದಷ್ಟು ಕೊರೊನಾ ವೈರಸ್‌ ಸೋಂಕಿತರು ಈಗಲೂ ಯಾವುದಾದರೂ ಒಂದು ಕೋವಿಡ್‌ ಲಕ್ಷಣದಿಂದ ಬಳಲುತ್ತಿದ್ದಾರೆ. ಅಂದರೆ ಸೋಂಕಿನಿಂದ ಗುಣಮುಖರಾದವರಲ್ಲಿ ಒಂದು ವರ್ಷ ಕಳೆದರೂ ಉಸಿರಾಟದ ತೊಂದರೆ ಆಯಾಸದಂತಹ ಲಕ್ಷಣಗಳು ಕಂಡು ಬರುತ್ತಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಪೈಕಿ ಅಧಿಕವಾಗಿ ಆಯಾಸ ಹಾಗೂ ಸ್ನಾಯು ದೌರ್ಬಲ್ಯ ಕಂಡು ಬರುತ್ತದೆ ಎಂದು ಈ ಚೀನಾದ ಅಧ್ಯಯನ ವರದಿಯು ಹೇಳುತ್ತದೆ.

ಇನ್ನು ಆಯಾಸ, ಉಸಿರಾಟದ ಸಮಸ್ಯೆ ಹಾಗೂ ಸ್ನಾಯು ದೌರ್ಬಲ್ಯದಂತಹ ಲಕ್ಷಣಗಳು ಕೋವಿಡ್‌ ಸೋಂಕಿನಿಂದ ಗುಣಮುಖರಾದ ಸುಮಾರು 12 ತಿಂಗಳ ಬಳಿಕ ಅಧಿಕ ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ಅಧ್ಯಯನವು ಉಲ್ಲೇಖ ಮಾಡಿದೆ. ಈ ಅಧ್ಯಯನವು ಧೀರ್ಘ ಕೋವಿಡ್‌ ಎಂಬ ಸ್ಥಿತಿಯ ಬಗ್ಗೆ ಮಾಡಲಾದ ಅಧ್ಯಯನವಾಗಿದೆ. ಹಾಗೆಯೇ ಮೂರು ಜನರಲ್ಲಿ ಒಬ್ಬರಿಗೆ ತಾವು ಕೋವಿಡ್‌ಗೆ ಚಿಕಿತ್ಸೆ ಪಡೆದು ಒಂದು ವರ್ಷವಾದರೂ ಉಸಿರಾಟದ ಸಮಸ್ಯೆ ಇದೆ ಎಂದು ತಿಳಿಸಿದೆ. ಹಾಗೆಯೇ ಕೊರೊನಾ ವೈರಸ್‌ ಸೋಂಕಿನಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾದವರಲ್ಲಿ ಅಧಿಕವಾಗಿ ಈಗಲೂ ಈ ಸಮಸ್ಯೆಗಳು ಇದೆ ಎಂದು ಅಧ್ಯಯನ ಉಲ್ಲೇಖ ಮಾಡಿದೆ.

LEAVE A REPLY

Please enter your comment!
Please enter your name here