ಕೋಟಿಗೊಬ್ಬ3 ತಂಡದಿಂದ ಪೋಸ್ಟರ್ ಡಿಸೈನರ್ ಔಟ್ – ಸುದೀಪ್ ತೋರಿದ ಕಾಳಜಿ ಅದೆಂಥಾದ್ದು ಗೊತ್ತಾ?

Date:

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ-3’. ಶಿವ ಕಾರ್ತಿಕ್ ನಿರ್ದೇಶನದ ಸೂರಬ್ಬ ಬಾಬು ನಿರ್ಮಾಣದ ‘ಕೋಟಿಗೊಬ್ಬ-3’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆದರೆ, ಕೊರೊನಾ ಆರ್ಭಟ ಮತ್ತೆ ವಿಪರೀತವಾಗಿದ್ದು, ಅದನ್ನ ನಿಯಂತ್ರಿಸಲು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಥಿಯೇಟರ್‌ಗಳಲ್ಲಿ 50% ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಬಿಡುಗಡೆಗೆ ಸಿದ್ಧವಾಗಿದ್ದ ಚಿತ್ರಗಳು ಮುಂದಕ್ಕೆ ಹೋಗಿವೆ.

ಹೀಗಿರುವಾಗಲೇ, ‘ಕೋಟಿಗೊಬ್ಬ-3’ ಚಿತ್ರತಂಡದಿಂದ ಪೋಸ್ಟರ್ ಡಿಸೈನರ್ ಸಾಯಿಕೃಷ್ಣ ಎನ್‌ರೆಡ್ಡಿ ಔಟ್‌ ಆಗಿದ್ದಾರೆ. ಈ ಬಗ್ಗೆ ಪೋಸ್ಟರ್ ಡಿಸೈನರ್ ಸಾಯಿಕೃಷ್ಣ ಎನ್‌ರೆಡ್ಡಿ ಟ್ವಿಟ್ಟರ್‌ನಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ. ಸಾಯಿಕೃಷ್ಣ ಎನ್‌ರೆಡ್ಡಿರವರ ಟ್ವೀಟ್ ನೋಡಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಕಿಚ್ಚ ಸುದೀಪ್ ತೋರಿದ ಕಾಳಜಿಗೆ ಸಾಯಿಕೃಷ್ಣ ಎನ್‌ರೆಡ್ಡಿ ಸಲಾಂ ಎಂದಿದ್ದಾರೆ.

ಯುಗಾದಿ ಹಬ್ಬವನ್ನು ಎಲ್ಲರೂ ಖುಷಿಯಿಂದ ಆಚರಣೆ ಮಾಡುತ್ತಿರುವಾಗಲೇ, ಪೋಸ್ಟರ್ ಡಿಸೈನರ್ ಸಾಯಿಕೃಷ್ಣ ಎನ್‌ರೆಡ್ಡಿರವರ ಕಡೆಯಿಂದ ಒಂದು ಬೇಸರದ ಟ್ವೀಟ್ ಹೊರಬಂತು.

”ಕಿಚ್ಚನ ಅಭಿಮಾನಿಗಳಿಗೆ, ಇಂದಿನಿಂದ ನಾನು ‘ಕೋಟಿಗೊಬ್ಬ-3′ ಚಿತ್ರದ ಅಫೀಶಿಯಲ್ ಪೋಸ್ಟರ್ ಡಿಸೈನರ್ ಅಲ್ಲ. ಕಾರಣ ಮತ್ತು ಅಂತರಗಳಿಂದ ನನಗೆ ಮಾಹಿತಿ ಕೂಡಾ ನೀಡದೆ ನಿರ್ಮಾಣ ಸಂಸ್ಥೆ ನಿರ್ಣಯಿಸಿದೆ. ಈ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣಗಳು – 1:ಸುದೀಪ್ ಸರ್, 2: ಅವರ ಅಭಿಮಾನಿಗಳು, 3: ದುಡ್ಡು (ಕೋವಿಡ್ ಇಂಪ್ಯಾಕ್ಟ್). ಇನ್ಯಾರೂ ಅಲ್ಲ. ಕ್ಷಮೆ ಇರಲಿ ಗೆಳೆಯರೇ” ಎಂದು ಸಾಯಿಕೃಷ್ಣ ಎನ್‌ರೆಡ್ಡಿ ಟ್ವೀಟ್ ಮಾಡಿದ್ದರು.

”ಕೋಟಿಗೊಬ್ಬ-3’ ಜೊತೆಗೆ ನೀವು ಇಷ್ಟು ದೂರ ಪ್ರಯಾಣ ಮಾಡಿದ್ದೀರಾ. ಈ ಪಯಣವನ್ನು ನೀವು ಪೂರ್ತಿ ಮಾಡಬೇಕೆಂದು ನನ್ನ ಬಯಕೆ. ನಿಮ್ಮ ನಿರ್ಧಾರ ಏನೇ ಇದ್ದರೂ, ಅದನ್ನು ನಾನು ಗೌರವಿಸುತ್ತೇನೆ. ಆದರೆ, ನೀವು ಈ ರೀತಿ ಟ್ವೀಟ್ ಮಾಡಲು ಕಾರಣವೇನು ಎಂಬುದರ ಬಗ್ಗೆ ನಾನು ಖಂಡಿತ ತಿಳಿದುಕೊಳ್ಳುತ್ತೇನೆ. ಈಗ ಚಿಯರ್ಸ್ ಮಾಡಿ.. ಹ್ಯಾಪಿ ಯುಗಾದಿ ಗೆಳೆಯ” ಎಂದು ಸಾಯಿಕೃಷ್ಣ ಎನ್‌ರೆಡ್ಡಿ ಟ್ವೀಟ್‌ಗೆ ಸುದೀಪ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸುದೀಪ್ ನೀಡಿದ ಪ್ರತಿಕ್ರಿಯೆಯನ್ನು ನೋಡಿ, ”ಇದೇ ಕಾರಣಕ್ಕೆ ನಿಮ್ಮ ಸಿನಿಮಾಗಳಿಗಾಗಿ ಕೆಲಸ ಮಾಡಲು ನನಗೆ ಖುಷಿ ಇದೆ. ನಿಷ್ಠಾವಂತರಿಗೆ ನೀವು ತೋರುವ ಕಾಳಜಿ ಅದ್ಭುತ. ನಿಮ್ಮ ಕಾಳಜಿಗೆ ಧನ್ಯವಾದ ಸರ್. ಹ್ಯಾಪಿ ಯುಗಾದಿ ಸರ್” ಎಂದು ಸಾಯಿಕೃಷ್ಣ ಎನ್‌ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಹಲವು ಚಿತ್ರಗಳಿಗೆ ಪೋಸ್ಟರ್ ಡಿಸೈನರ್ ಆಗಿ ಸಾಯಿಕೃಷ್ಣ ಎನ್‌ರೆಡ್ಡಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಅಜಯ್’, ‘ಪರಮಾತ್ಮ’, ‘ರಣವಿಕ್ರಮ’ ಮುಂತಾದ ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ‘ಕೆಂಪೇಗೌಡ’, ‘ವಿಷ್ಣುವರ್ಧನ’, ‘ವರದನಾಯಕ’, ‘ಕೋಟಿಗೊಬ್ಬ-2’, ‘ಹೆಬ್ಬುಲಿ’ ಸೇರಿದಂತೆ ಅನೇಕ ಚಿತ್ರಗಳಿಗೆ ಸಾಯಿಕೃಷ್ಣ ಎನ್‌ರೆಡ್ಡಿ ಪೋಸ್ಟರ್ ಡಿಸೈನ್ ಮಾಡಿದ್ದಾರೆ.

‘ಕ’ ಚಿತ್ರ ಹಾಗೂ ‘ಮುದ್ದು ಮುದ್ದಾಗಿ’ ಕಿರುಚಿತ್ರವನ್ನು ಸಾಯಿಕೃಷ್ಣ ಎನ್‌ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಕಿಚ್ಚ ಸುದೀಪ್‌ಗೂ ಆಕ್ಷನ್ ಕಟ್ ಹೇಳುವ ಆಸೆ ಸಾಯಿಕೃಷ್ಣ ಎನ್‌ರೆಡ್ಡಿಗಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...