ಹಾಸನ : ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ, ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಡೆಸಿಕೊಡೋ ಜನಪ್ರಿಯ ರಿಯಾಲಿಟಿ ಶೋ ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದ ಹಣವನ್ನು ಬಾಲಕ ತನ್ನ ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ಮುಕ್ತ ಮನಸ್ಸಿಂದ ನೀಡಿ ರಿಯಲ್ ಹೀರೋ ಆಗಿದ್ದಾನೆ.
ಆತ ಮೈಸೂರು ಜಿಲ್ಲೆಯ ಕೆಡಗ ಗ್ರಾಮದ ತೇಜಸ್. ಈತ ಹಾಸನದ ಕಟ್ಟಾಯ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
ಕನ್ನಡದ ಕೋಟ್ಯಧಿಪತಿಯಲ್ಲಿ 6, 40,000 ರೂ ಗೆದ್ದು, ಪೋಷಕರ, ಶಾಲೆಯ, ಶಿಕ್ಷಕರ, ಊರಿನ ಕೀರ್ತಿ ಬೆಳಗಿದ್ದಾನೆ. ಗೆಲುವಿಗಿಂತ ಮಿಗಿಲಾಗಿ ಗೆದ್ದ ಹಣದ ಪಾಲನ್ನು ಶಾಲಾ ಕಾರ್ಯಕ್ಕೆ ನೀಡಿ ಮಾದರಿಯಾಗಿದ್ದಾನೆ.
ಈ ಬಗ್ಗೆ, ಹಣ ಗೆದ್ದಿದ್ದಕ್ಕಿಂತ, ಹಾಟ್ ಸೀಟಲ್ಲಿ ಕೂತು ಆಟವಾಡಿದ್ದು ಖುಷಿಯಾಗಿದೆ. ಪುನೀತ್ ರಾಜ್‌ಕುಮಾರ್ ಜೊತೆ ಕುಳಿತಿದ್ದು ಹೆಮ್ಮೆ ಎಂದು ತೇಜಸ್ ಸಂತಸ ಹಂಚಿಕೊAಡಿದ್ದಾನೆ. ಮುಖ್ಯೋಪಾಧ್ಯಯ ಶೇಖರ್ ಸೇರಿದಂತೆ ತನ್ನ ಗುರುಗಳು, ಪೋಷಕರು ನೀಡಿದ ಸಹಕಾರವನ್ನು ಸ್ಮರಿಸಿದ್ದಾನೆ. ಅಮ್ಮ ಅಪ್ಪಗೆ ನಾನು ಹಣ ಗೆದ್ದಿರೋದು ಖುಷಿಕೊಟ್ಟಿದೆ. ಆದರೆ, ಹಣ ಗೆದ್ದೆನ್ನೆಂದು ಗರ್ವ ಪಡಬೇಡ. ಚೆನ್ನಾಗಿ ಓದುವ ಕಡೆಯೂ ಗಮನ ಕೊಡು ಎಂದಿದ್ದಾರೆ ಎಂದು ವಿನಮ್ರತೆಯಿಂದ ಹೇಳಿಕೊಳ್ಳುತ್ತಾನೆ.