ಕ್ರಿಕೆಟ್ ದೇವರು ಯಾರು ಅಂದ್ರೆ ಆಡುವ ಮಗು ಕೂಡ ಸಚಿನ್ ತೆಂಡೂಲ್ಕರ್ ಅಂತಾ ಹೇಳುತ್ತೆ. ದಾಖಲೆಗಳ ಸರದಾರ, ಕ್ರಿಕೆಟ್ನ ದಂತಕತೆ, ಮಾಸ್ಟರ್ ಬ್ಲಾಸ್ಟರ್ ಅಂತಲೇ ಬಿರುದು ಪಡೆದುಕೊಂಡಿರೋ ಸಚಿನ್ ಇತ್ತೀಚಿಗೆ ತಾನೆ 46ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡ್ರು. ಕ್ರಿಕೆಟ್ ದೇವರ ಹುಟ್ಟುಹಬ್ಬವನ್ನು ಅವರ ಕುಟುಂಬ ಮಾತ್ರವಲ್ಲ ಕೋಟ್ಯಾಂತರ ಅಭಿಮಾನಿಗಳು ಕೂಡ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸುತ್ತಾರೆ.
ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ಗೆ ಬರ್ತ್ಡೇ ಸಂಭ್ರಮದಲ್ಲಿರುವಾಗಲೇ ಇನ್ನು ಬಿಸಿಸಿಐ ಬಿಗ್ ಶಾಕ್ ನೀಡಿದೆ. ಹೌದು ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಇದೇ ವೇಳೆ ಕ್ರಿಕೆಟ್ ಅಡ್ವೈಸರಿ ಕಮಿಟಿ ಸದಸ್ಯರಾಗಿಯೂ ಕಾರ್ಯನಿರತರಾಗಿದ್ದು ಒಂದೇ ಬಾರಿಯಲ್ಲಿ ಎರಡು ಕಡೆ ಕಾರ್ಯನಿರ್ವಹಿಸುತ್ತಿದ್ದಾರೆ.
ಹೀಗಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ಗೆ ಹಿತಾಸಕ್ತಿ ಸಂಘರ್ಷ ಆರೋಪದ ಮೇಲೆ ಬಿಸಿಸಿಐ ಒಂಬುಡ್ಸ್ಮನ್ ಡಿ.ಕೆ ಜೈನ್ ಅವರು ನೋಟಿಸ್ ನೀಡಿದ್ದಾರೆ. ಮಧ್ಯ ಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಕುಮಾರ್ ಅವರು ನೀಡಿದ ದೂರಿನ ಅನ್ವಯ ಬಿಸಿಸಿಐ ನಿಯಮಗಳು ಮತ್ತು ನಿಬಂಧನೆಗಳ ಅಧಿನಿಯಮ 39ರ ಅಡಿಯಲ್ಲಿ ಏಪ್ರಿಲ್ 29ರ ಒಳಗಾಗಿ ಬಹರದ ಮೂಲಕಸ ಪ್ರತಿಕ್ರಿಯೆ ದಾಖಲಿಸುವಂತೆಯೂ ಸೂಚಿಸಲಾಗಿದೆ.
ಸದ್ಯ ಈಗ ನೀಡಲಾಗಿರುವ ನೋಟಿಸ್ಗೆ ಪ್ರತಿಕ್ರಿಯಿಸಲು ವಿಫಲವಾದರೆ, ನೀತಿ ಅಧಿಕಾರಿಯು ಮತ್ತೊಂದು ಅವಕಾಶಗಳನ್ನು ನೀಡದೆ ನಿಮ್ಮ ಮೇಲೆ ನಿರ್ಬಂಧನೆಗಳನ್ನು ವಿಧಿಸಬಹುದು ಎಂದು ಉಲ್ಲೇಖಿಸಿದ್ದಾರೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗೆ ನೋಟಿಸ್ ನೀಡಿದ್ದು ಯಾಕೆ ಗೊತ್ತೇ?
Date: