ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಮೊದಲನೆ ಟೆಸ್ಟ್ ಪಂದ್ಯ ವೈಜಾಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಭಾರತ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಇನ್ನು ಇದೇ ವೇಳೆ ಅಸಹಜ ಘಟನೆಯೊಂದು ನಡೆದಿದ್ದು ಕ್ರೀಡಾಂಗಣದಲ್ಲಿಯೇ ರೋಹಿತ್ ಶರ್ಮಾ ಅವರು ತಮ್ಮ ಸಹ ಆಟಗಾರ ಚೇತೇಶ್ವರ್ ಪೂಜಾರ ಅವರಿಗೆ ಕೆಟ್ಟ ಮಾತಿನಿಂದ ಬೈದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಅವರು ಸ್ಕ್ರೀನ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಒಂದು ರನ್ ಓಡುವ ಅವಕಾಶ ಇದ್ದಾಗ ರೋಹಿತ್ ಶರ್ಮಾ ಅವರು ಓಡಲು ಮುಂದಾಗಿದ್ದಾರೆ. ಆದರೆ ಚೇತೇಶ್ವರ ಪೂಜಾರ ಅವರು ಮಾತ್ರ ಓಡಲು ಆಗದೆ ಮರಳಿ ಕ್ರೀಸ್ ನತ್ತ ತೆರಳಿದ್ದಾರೆ ಇದಾದ ನಂತರ ಕ್ರೀಸ್ ಗೆ ಮರಳಿದ ರೋಹಿತ್ ಶರ್ಮ ಅವರು ಕೆಟ್ಟ ಮಾತಿನಿಂದ ಚೇತೇಶ್ವರ್ ಪೂಜಾರ ಅವರಿಗೆ ರನ್ ಓಡದ ಕಾರಣಕ್ಕೆ ಬೈದಿದ್ದಾರೆ.