ಸರ್ಕಾರಿ ಅಧಿಕಾರಿಗಳ ಬಂಗಲೆಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳ ಎಣ್ಣೆ ಪಾರ್ಟಿ..! ರಹಸ್ಯವಾಗಿ ವಿಡಿಯೋ ರೆಕಾರ್ಡ್

Must read

ಸರ್ಕಾರಿ ಕಚೇರಿಗಳನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುವುದು ಆಗಾಗ ಬೆಳಕಿಗೆ ಬರುತ್ತಲೇ ಇದೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ಹಾಸನ ಜಿಲ್ಲೆಯ ಒಟ್ಟು ಆರು ತಹಸೀಲ್ದಾರ್ಗಳು ಎಣ್ಣೆ ಪಾರ್ಟಿಯನ್ನು ಮಾಡಿದ್ದಾರೆ.

ಹೊಳೆನರಸೀಪುರ, ಹಾಸನ , ಸಕಲೇಶಪುರ , ಅರಸೀಕೆರೆ ಚನ್ನರಾಯಪಟ್ಟಣ ಮತ್ತು ಅರಕಲಗೂಡು ತಹಸೀಲ್ದಾರ್ಗಳು ಐಬಿಯಲ್ಲಿ ಸೇರಿ ಎಣ್ಣೆ ಪಾರ್ಟಿ ಮತ್ತು ಭೋಜನ ಕೂಟವನ್ನು ಹಮ್ಮಿಕೊಂಡಿದ್ದರು ಈ ಔತಣ ಕೂಟ ಮತ್ತು ಎಣ್ಣೆ ಪಾರ್ಟಿಯ ವಿಡಿಯೋವನ್ನು ಹಾಸನ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇನ್ನು ಈ ವಿಷಯ ತಿಳಿಯುತ್ತಿದ್ದಂತೆ ನೆರೆದಿದ್ದ ಅಧಿಕಾರಿಗಳು ಅಲ್ಲಿಂದ ಕಾಲ್ಕಿತ್ತಿದ್ದು ನಂತರ ಪೊಲೀಸರು ನಾಗೇಶ್ ಅವರಿಗೆ ಹಲ್ಲೆ ಮಾಡಿ ಅವರನ್ನು ಬಂಧಿಸಿದ್ದಾರೆ.

- Advertisement -spot_img

More articles

- Advertisement -spot_img

Latest article