ನೂತನವಾಗಿ ಆಯ್ಕೆಯಾದ ಸಂಸದರಿಗೆ ಹಂಚಿಕೆ ಮಾಡಲು ಖಾಲಿ ಇರುವ ಬಂಗಲೆಗಳ ಪಟ್ಟಿಯಲ್ಲಿ ರಾಹುಲ್ ಗಾಂಧಿ ವಾಸಿಸುತ್ತಿದ್ದ ತುಘಲಕ್ ಲೇನ್ ಬಂಗಲೆಯೂ ಸೇರಿದೆ.
ಹೊಸದಾಗಿ ಹಂಚಿಕೆ ಮಾಡಲು ಲೋಕಸಭೆ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿರುವ ಬಂಗಲೆ ಹಾಗೂ ವಿಳಾಸದ ಪಟ್ಟಿ ಬಹಿರಂಗವಾಗಿದೆ.
ಅತಿ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ‘ಟೈಪ್-8’ ವರ್ಗಕ್ಕೆ ರಾಹುಲ್ ಗಾಂಧಿ ವಾಸಿಸುತ್ತಿದ್ದ ಬಂಗಲೆ ಸೇರುತ್ತದೆ.
2004ರಲ್ಲಿ ಅಮೇಥಿಯಿಂದ ಸಂಸದರಾಗಿ ಆಯ್ಕೆಯಾದ ನಂತರ ರಾಹುಲ್ ಗಾಂಧಿ ಅದೇ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.