ಗಂಗೂಲಿಗೆ ನೀವೀಗ BCCI ಅಧ್ಯಕ್ಷರು, ಪ್ರೊಫೆಷನಲ್ ಆಗಿರಿ ಎಂದ ಯುವರಾಜ್ ಸಿಂಗ್..!

Date:

ಭಾರತೀಯ ಕ್ರಿಕೆಟ್​ಗೆ ಹೊಸ ರೂಪ ನೀಡಿದ ನಾಯಕ, ಇಂದಿನ ಬಿಸಿಸಿಐ ಅಧ್ಯಕ್ಷ , ಬಂಗಾಳದ ಹುಲಿ ಸೌರವ್​ ಗಂಗೂಲಿಗೆ ಟೀಮ್ ಇಂಡಿಯಾ ಮಾಜಿ ಆಲ್​​ ರೌಂಡರ್, 2007ರ ಟಿ20, 2011ರ ವಿಶ್ವಕಪ್​ ಹೀರೋ ಸಿಕ್ಸರ್ ಕಿಂಗ್ ಯುವರಾಜ್​ ಸಿಂಗ್ ಕಾಲೆಳೆದಿದ್ದಾರೆ. ನೀವೀಗ BCCI ಅಧ್ಯಕ್ಷರು, ಪ್ರೊಫೆಷನಲ್ ಆಗಿರಿ ಅಂತ ತಮಾಷೆ ಮಾಡಿದ್ದಾರೆ!


ಸೌರವ್ ಗಂಗೂಲಿ 1996ರಲ್ಲಿ ಲಾರ್ಡ್ಸ್​ನಲ್ಲಿ ನಡೆದ ತಮ್ಮ ಡೆಬ್ಯೂ ಟೆಸ್ಟ್​​ ಪಂದ್ಯದ ಫೋಟೋವೊಂದನ್ನು ಇನ್ಸ್​​​ಟಾಗ್ರಾಮಲ್ಲಿ ಶೇರ್ ಮಾಡಿದ್ದರು. ರಾಹುಲ್ ದ್ರಾವಿಡ್ ಅವರೊಡನೆ ಇರುವ ಫೋಟೋವನ್ನು ಹಾಕಿ ಶತಕ ಸಿಡಿಸಿ ಮಿಂಚಿದ್ದ ದಿನವನ್ನು ಸ್ಮರಿಸಿದ್ದರು. ಅದೊಂದು ಅದ್ಭುತ ನೆನಪೆಂದು ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ ಜೀವನದ ಮೊದಲ ಪಂದ್ಯವನ್ನು ನೆನೆದಿದ್ದರು.
ಆ ಪೋಸ್ಟ್​ನಲ್ಲಿದ್ದ ಫೋಟೋದಲ್ಲಿ ಏಜೆನ್ಸಿಯೊಂದರ ವಾಟರ್​ ಮಾರ್ಕ್​​​ ಇತ್ತು. ಅದನ್ನು ಗಮಿಸಿ ಯುವಿ ಆ ರೀತಿ ಕಾಮೆಂಟ್ ಮಾಡಿದ್ದಾರೆ. ದಾದಾ ನಿಮ್ಮನ್ನು ನೋಡುತ್ತಿರುತ್ತಾರೆ. ನೀವು ಈಗ ಬಿಸಿಸಿಐ ಅಧ್ಯಕ್ಷರು. ಹೀಗಾಗಿ ದಯವಿಟ್ಟು ಪ್ರೊಫೆಷನಲ್ ಆಗಿರಿ ಎಂದು ಕಾಲೆಳೆದಿದ್ದಾರೆ.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...