ಗಂಧದಗುಡಿ ಟೀಸರ್ ನೋಡಿ ಇದನ್ನು ತೆಗೆಯಿರಿ ಎಂದಿದ್ರು ಅಪ್ಪು!

0
39

ಪುನೀತ್ ರಾಜ್ ಕುಮಾರ್.. ಇದ್ದಾಗ ಎಷ್ಟು ಹೆಸರು ಮತ್ತು ಗೌರವವನ್ನು ಸಂಪಾದಿಸಿದ್ದರೋ ಸತ್ತ ಮೇಲೂ ಕೂಡ ಅಷ್ಟೇ ಮಟ್ಟದ ಹೆಸರು ಮತ್ತು ಗೌರವವನ್ನು ಉಳಿಸಿಕೊಂಡಿರುವಂಥ ಜಗಮೆಚ್ಚಿದ ಅಪ್ಪು ಅವರ ಕುರಿತು ಸಾಕಷ್ಟು ಮುಚ್ಚಿಟ್ಟಿದ್ದ ವಿಷಯಗಳು ಬಹಿರಂಗವಾಗತೊಡಗಿವೆ.

ಪುನೀತ್ ರಾಜ್ ಕುಮಾರ್ ಎಂಥ ಸರಳ ವ್ಯಕ್ತಿ ಮತ್ತು ಆಗರ್ಭ ಶ್ರೀಮಂತರಾಗಿದ್ದರೂ ಸಹ ಪುನೀತ್ ರಾಜ್ ಕುಮಾರ್ ಅವರು ಎಲ್ಲಿಯೂ ಅಹಂಕಾರ ಮತ್ತು ನಾನು ಎಂದು ಹೇಳಿಕೊಳ್ಳುತ್ತಲೇ ಇರಲಿಲ್ಲ. ಅತಿ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿ ಎಲ್ಲಾ ನಾಯಕನಟರುಗಳಿಗಿಂತಲೂ ಹೆಚ್ಚಿನ ಗೆಲುವಿನ ಶೇಕಡಾಂಶವನ್ನು ಹೊಂದಿದ್ದರೂ ಕೂಡ ಪುನೀತ್ ರಾಜ್ ಕುಮಾರ್ ಅವರು ನಾನು ಸ್ಟಾರ್, ನಾನು ನಂಬರ್ 1 ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

 

ತಮ್ಮದೇ ಆದ ಸ್ವಂತ ಪ್ರೊಡಕ್ಷನ್ ಹೌಸ್ ನಿರ್ಮಿಸಿ ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡಿ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ನಟ, ನಟಿಯರು ಹಾಗೂ ನಿರ್ದೇಶಕರನ್ನು ಪರಿಚಯಿಸುವ ಕಾಯಕಕ್ಕೆ ಕೈ ಹಾಕಿದ್ದ ಪುನೀತ್ ರಾಜ್ ಕುಮಾರ್ ತಮ್ಮ ಹಲವಾರು ಮಹತ್ಕಾರ್ಯಗಳನ್ನು ಮಾರ್ಗ ಮಧ್ಯದಲ್ಲಿಯೇ ಬಿಟ್ಟು ಹೊರಟಿದ್ದಾರೆ. ಇಂತಹ ಅತ್ಯದ್ಭುತ ಕೆಲಸಗಳಲ್ಲಿ ಕರ್ನಾಟಕದ ಅಭಯಾರಣ್ಯದ ಸಿರಿತನವನ್ನು ಸಾರುವ ಗಂಧದಗುಡಿ ಕೂಡ ಒಂದು.

ಹೌದು ಪುನೀತ್ ರಾಜ್ ಕುಮಾರ್ ಅವರೇ ತಮ್ಮ ಸಂಗಡಿಗರ ಜೊತೆ ಕರ್ನಾಟಕದ ಅಭಯಾರಣ್ಯಗಳನ್ನು ಸುದ್ದಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದ ಡಾಕ್ಯುಮೆಂಟರಿಯೇ ಗಂಧದ ಗುಡಿ. ಪುನೀತ್ ನಿಧನ ಹೊಂದುವ ಮುನ್ನ ಫೇಸ್ ಬುಕ್ ಮೂಲಕ ಕೊನೆಯದಾಗಿ ಹಂಚಿಕೊಂಡಿದ್ದು ಕೂಡ ಈ ಡಾಕ್ಯುಮೆಂಟರಿಯ ಬಗ್ಗೆಯೇ. ಅಷ್ಟೇ ಯಾಕೆ ಪುನೀತ್ ಡಿಸ್ತ್ರಿಬ್ಯೂಟರ್ ಜೊತೆಗೆ ಫೋನಿನ ಮೂಲಕ ಮಾತನಾಡಿದ್ದ ಆಡಿಯೋವೊಂದು ವೈರಲ್ ಆಗಿತ್ತು. ಆತ ಆಡಿಯೋದಲ್ಲಿ ಡಿಸ್ತ್ರಿಬ್ಯೂಟರ್ ಜೊತೆ ಪುನೀತ್ 1 ಟೀಸರ್ ಇದೆ ಅದನ್ನು ಸಾಧ್ಯವಾದಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರು.

 

ಅಪ್ಪು ಇದ್ದಿದ್ದರೆ ಅವರ ಆಸೆಯಂತೆ ಆ ಟೀಸರ್ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ಅವರ ದಿಢೀರ್ ಮರಣದಿಂದ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಬೇಕಿದ್ದ ಗಂಧದ ಗುಡಿ ಟೀಸರ್ ಸ್ವಲ್ಪ ತಡವಾಗಿ ಬಿಡುಗಡೆಯಾಯಿತು. ಪುನೀತ್ ಕನಸಿನಂತೆ ಗಂಧದಗುಡಿ ಡಾಕ್ಯುಮೆಂಟರಿಯ ಕೆಲಸಗಳನ್ನು ಅವರ ಪತ್ನಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಹಾಗೂ ಈ ಡಾಕ್ಯುಮೆಂಟರಿಯಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಕೈಜೋಡಿಸಿರುವ ಅಮೋಘವರ್ಷ ಪುರ ಡಾಕ್ಯುಮೆಂಟರಿಯನ್ನು ಪುನೀತ್ ಅವರ ಕನಸಿನಂತೆ ತೆರೆಮೇಲೆ ತರಲು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

 

ಹೀಗೆ ಗಂಧದ ಗುಡಿ ಟೀಸರ್ ಬಿಡುಗಡೆಯಾದ ನಂತರ ಮಾತನಾಡಿರುವ ಅಮೋಘವರ್ಷ ಅವರು ಈ ಹಿಂದೆ ಈ ಟೀಸರ್ ಕುರಿತಾಗಿ ಪುನೀತ್ ರಾಜ್ ಕುಮಾರ್ ಆಡಿದ ಮಾತುಗಳನ್ನು ಮೆಲುಕು ಹಾಕಿದ್ದಾರೆ. ಟೀಸರ್ ಎಡಿಟಿಂಗ್ ಕೆಲಸವೆಲ್ಲ ಮುಗಿದ ನಂತರ ಪುನೀತ್ ರಾಜಕುಮಾರ ಟೀಸರ್ ವೀಕ್ಷಿಸಿದ್ದರಂತೆ. ಆದರೆ ಆ ಟೀಸರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ಬಳಸಲಾಗಿತ್ತಂತೆ. ಇದನ್ನು ನೋಡಿದ ಕೂಡಲೆ ಅಮೋಘವರ್ಷ ಅವರಿಗೆ ಕರೆ ಮಾಡಿದ ಅಪ್ಪು ಎಲ್ಲವೂ ಸರಿಯಿದೆ ಆದರೆ ಆ ಟೀಸರ್ ನಲ್ಲಿ ಪವರ್ ಸ್ಟಾರ್ ಎನ್ನುವ ಸಾಲನ್ನು ದಯವಿಟ್ಟು ತೆಗೆದುಹಾಕಿಬಿಡಿ ಕೇವಲ ಪುನೀತ್ ರಾಜ್ ಕುಮಾರ್ ಎಂದೇ ಬಳಸಿ ಎಂದು ಮನವಿಯನ್ನು ಮಾಡಿಕೊಂಡರಂತೆ.

 

ಹೀಗೆ ಪುನೀತ್ ರಾಜ್ ಕುಮಾರ್ ಅವರು ಅಂದು ಮನವಿ ಮಾಡಿಕೊಂಡ ರೀತಿಯೇ ಇದೀಗ ಗಂಧದ ಗುಡಿ ಟೀಸರ್ ಮತ್ತು ಪೋಸ್ಟರ್ ಗಳಲ್ಲಿ ಎಲ್ಲಿಯೂ ಕೂಡ ಪವರ್ ಸ್ಟಾರ್ ಎಂಬ ಬಿರುದನ್ನು ಬಳಸಲಾಗಿಲ್ಲ ಕೇವಲ ಶ್ರೀ ಪುನೀತ್ ರಾಜ್ ಕುಮಾರ್ ಎಂದೇ ಬಳಸಲಾಗುತ್ತಿದೆ. ಹೀಗೆ ಪುನೀತ್ ರಾಜ್ ಕುಮಾರ್ ಅವರು ಈ ಬದಲಾವಣೆಯನ್ನು ಮಾಡಿ ಎಂದು ಸ್ವತಃ ಕರೆ ಮಾಡಿ ಹೇಳಿದ್ದನ್ನು ನೆನಪಿಸಿಕೊಂಡು ಅಮೋಘವರ್ಷ ಭಾವುಕರಾದರು.

 

 

 

LEAVE A REPLY

Please enter your comment!
Please enter your name here