ಗಣರಾಜ್ಯೋತ್ಸವಕ್ಕೆ ಟೀಮ್ ಇಂಡಿಯಾ ಗಿಫ್ಟ್: ಕಿವೀಸ್ ವಿರುದ್ದ ಎರಡನೆ ಗೆಲುವು..!!
ಇಂದು ರಾಷ್ಟ್ರದಾದ್ಯಂತ 70 ಗಣರಾಜ್ಯೋತ್ಸವವನ್ನ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.. ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿಯ ಬ್ಲೂ ಬಾಯ್ಸ್ ಪಡೆ ನ್ಯೂಜಿಲೆಂಡ್ ತಂಡವನ್ನ ಸೋಲಿಸಿ ನಾಡಿನ ಜನತೆಗೆ ಕೊಡುಗೆ ನೀಡಿದೆ.. ಶಿಖರ್ ಧವನ್ 66, ರೋಹಿತ್ ಶರ್ಮಾ 87, ವಿರಾಟ್ ಕೊಹ್ಲಿ 43, ಅಂಬಟಿ ರಾಯಡು 47, ಧೋನಿಯ(48) ಬ್ಯಾಟಿಂಗ್ ನಿಂದ ಬೃಹತ್ ಮೊತ್ತ ಕಲೆ ಹಾಕಿದ ಟೀಮ್ ಇಂಡಿಯಾ 324/4 ರನ್ ಗಳನ್ನ ಕಲೆ ಹಾಕಿತ್ತು…
ಇನ್ನು ಕುಲದೀಪ್ ಯಾದವ್ ಬೌಲಿಂಗ್ ದಾಳಿ ಮೊದಲ ಪಂದ್ಯದಂತೆ ಇಂದು ಸಹ ಮುಂದುವರೆದಿದ್ದು, ಇದಕ್ಕೆ ನ್ಯೂಜಿಲೆಂಡ್ ತತ್ತರಿಸಿದ್ದು ಸತತ ಎರಡು ಪಂದ್ಯಗಳಲ್ಲಿ ಕುಲದೀಪ್ 4 ವಿಕೆಟ್ ಪಡೆದು ಗಮನ ಸೆಳೆದ್ರು.. ಭಾರತೀಯ ಬೌಲರ್ ಗಳ ಮುಂದೆ ಕಿವೀಸ್ ಬ್ಯಾಟ್ಸಮನ್ ಗಳು ಪೆವಿಲಿಯನ್ ಪೆರೇಡ್ ನಡೆಸಿದಂತಿತ್ತು.. ಹೀಗಾಗೆ ಅತಿಥೇಯ ತಂಡ ಕೇವಲ 234 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿದೆ..
ಈ ಮೂಲಕ 5 ಏಕದಿನ ಸರಣಿಗಳ ಪೈಕಿ ಭಾರತ 2-0 ಮುನ್ನಡೆಯನ್ನ ಸಾಧಿಸಿದೆ.. ಇನ್ನು ವಿರಾಟ್ ತವರಿಗೆ ವಾಪಸ್ ಆಗಲ್ಲಿದ್ದು, ಮುಂದಿನ ಏಕದಿನ ಪಂದ್ಯ ಹಾಗು ಟಿ-20 ಮ್ಯಾಚ್ ಗಳನ್ನ ರೋಹಿತ್ ಶರ್ಮಾ ಮುನ್ನಡೆಸಲ್ಲಿದ್ದಾರೆ.. ಒಟ್ಟಿನಲ್ಲಿ ಟೀಮ್ ಇಂಡಿಯಾ ಇಂದು ಭಾರತೀಯರಿಗೆ ಗಣರಾಜ್ಯೋತ್ಸವದ ಗಿಫ್ಟ್ ಎಂಬಂತೆ ಮ್ಯಾಚ್ ಗೆದ್ದುಕೊಟ್ಟಿದೆ..