No menu items!
9.3 C
Munich
Wednesday, April 29, 2026

‘ಅಗ್ನಿಸಾಕ್ಷಿ’ಯಾಗಿ ಮದುವೆಯಾಗಲು ಸಿದ್ದವಾದ ಸಿದ್ಧಾರ್ಥ.. ಹುಡುಗಿ ಯಾರು ಗೊತ್ತಾ..?

Must read

‘ಅಗ್ನಿಸಾಕ್ಷಿ’ಯಾಗಿ ಮದುವೆಯಾಗಲು ಸಿದ್ದವಾದ ಸಿದ್ಧಾರ್ಥ.. ಹುಡುಗಿ ಯಾರು ಗೊತ್ತಾ..?

ಅಗ್ನಿಸಾಕ್ಷಿ ಸಿರೀಯಲ್ ಮೂಲಕ ಹೆಣ್ಣ್ ಹೈಕ್ಳ ಹಾರ್ಟ್ ಕದ್ದ ಹಾಡ್ ಸಮ್ ಹುಡುಗ ಸಿದ್ಧಾರ್ಥ್ (ವಿಜಯ್ ಸೂರ್ಯ) ಈಗ ಆ ಎಲ್ಲ ಹುಡುಗಿಯರ ಹಾರ್ಟ್ ಬ್ರೇಕ್ ಮದುವೆಯಾಗೋಕೆ‌ ಸಿದ್ದವಾಗಿದ್ದಾರೆ.. ಈ ಬಗ್ಗೆ ಸ್ವತಃ ಈ ನಟನೇ ಸ್ಪಷ್ಟ ಪಡಿಸಿದ್ದು ಮನೆಯವರು ಮೆಚ್ಚಿದ ಹುಡುಗಿಯನ್ನ ವರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.. ಇದೇ ಫೆಬ್ರವರಿ 14ಕ್ಕೆ ಈ ಜೋಡಿ ಹಸೆಮೆಣೆ ಏರಲ್ಲಿದ್ದು, ಎರಡು ಮನೆಯಲ್ಲು ಮದುವೆ ತಯಾರಿ ಜೋರಾಗೆ ನಡೆಯುತ್ತಿದೆ…

ಅಂದಹಾಗೆ ವಿಜಯ್ ಸೂರ್ಯ ಕೈ ಹಿಡಿಯುತ್ತಿರುವ ಹುಡುಗಿ ಹೆಸರು ಚೆತ್ರಾ ಅಂತ.. 23 ವರ್ಷದ ಚೈತ್ರ ಸಾಫ್ಟ್ವೇರ್ ಉದ್ಯೋಗಿಯಂತೆ.. ಈ ಇಬ್ಬರ ಕುಟುಂಬಕ್ಕೆ 9 ವರ್ಷಗಳ ಪರಿಚಯವಿದ್ದು, ವಿಜಯ್ ತಾಯಿ ಚೈತ್ರ ಮನೆಯವರ ಬಳಿ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಹುಡುಗಿ ಮನೆಯಲ್ಲು ಸಮ್ಮತಿ ಸಿಕ್ಕಿದ್ದು, ಆನಂತರ ಇಬ್ಬರ ಜಾತಕವು ಕೂಡಿ ಬಂದಿದೆ…

ಇವುಗಳ ನಡುವೆ ಈ ಇಬ್ಬರು ಒಬ್ಬರನ್ನೊಬ್ಬರು ಭೇಟಿ ಮಾಡಿ ಮಾತನಾಡಿದ್ದಾರೆ.. ಇಬ್ಬರ ನಡುವೆ ಹೊಂದಾಣಿಕೆ ಮೂಡಿದ್ರಿಂದ ಮದುವೆಗೆ ಓಕೆ ಅಂದಿದ್ದಾರೆ.. ಹೀಗಾಗೆ ಪ್ರೇಮಿಗಳ ದಿನದಂದು ಡೇಟ್ ಫಿಕ್ಸ್ ಆಗಿದ್ದು ಹೊಸ ಬಾಳಿಗೆ ಕಾಲಿಡಲು ಸಿದ್ಧಾರ್ಥ್ ಚೈತ್ರ ಸಿದ್ದವಾಗಿದ್ದಾರೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article