ಗಣರಾಜ್ಯೋತ್ಸವ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ !

0
120

75ನೇ ಗಣರಾಜ್ಯೋತ್ಸವ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.ಕರ್ನಾಟಕದ ಒಟ್ಟು 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ನೀಡಲಾಗುತ್ತಿದೆ. ವಿಶಿಷ್ಠ ಸೇವೆಗಾಗಿ ಎಡಿಜಿಪಿ ಸೌಮೆಂದ್ರ ಮುಖರ್ಜಿ ಮತ್ತು DySP ಸುಧೀರ್ ಮಹದೇವ್ ಹೆಗ್ಡೆಗೆ ರಾಷ್ಟ್ರಪತಿಗಳ ಪದಕ(ಪಿಎಸ್‌ಎಂ)  ನೀಡುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ‌.

ಇನ್ನೂ ಯಾರಿಗೆಲ್ಲಾ ಪ್ರಶಸ್ತಿ ನೀಡಲಾಗುತ್ತೆ ಅನ್ನೊದರ ಮಾಹಿತಿಯನ್ನ ನೋಡ್ತಾ ಹೋದರೆ, 19 ಪೊಲೀಸರಿಗೆ ಮೆರಿಟೋರಿಯಸ್ ಸೇವೆಗಾಗಿ ಪದಕ (ಎಂಎಸ್‌ಎಂ), ಪ್ರವೀಣ್ ಮಧುಕರ್ ಪವಾರ್, ಐಜಿಪಿ,ರಮನ್ ಗುಪ್ತಾ, ಐಜಿಪಿ, ಅನಿಲ್ ಕುಮಾರ್ ಎಸ್, ಎಎಸ್ ಪಿ, ಶಿವಗಂಗೆ ಪುಟ್ಟರಂಗಪ್ಪ, ಎಸಿಪಿ, ರಘು ಕುಮಾರ್ ಡಿವೈಎಸ್ಪಿ, ನಾರಾಯಣ ಸ್ವಾಮಿ, ಎಸಿಪಿ, ಶ್ರೀನಿವಾಸ್ ರಾಜ್ ಬೆಟೋಲಿ, ಡಿವೈಎಸ್ಪಿ, ಮಾಸ್ತೇನಹಳ್ಳಿ ರಾಮಪ್ಪ ಪಸ ಹರೀಶ್ ,ಇನ್ಸ್ ಪೆಕ್ಟರ್, ಸಣ್ಣ ರಂಗಪ್ಪ ವಿರೇಂದ್ರ ಪ್ರಸಾದ್, ಇನ್ಸ್ ಪೆಕ್ಟರ್, ದಾದಾಪೀರ್ ಕಣ್ಣೂರ್ ಸಾಬ್, ಸಬ್ ಇನ್ಸ್ ಪೆಕ್ಟರ್, ಸುರೇಶ್ ರಾಮಪ್ಪ ಪುಂಡಲಿಕಟ್ಟಿ, ಎಎಸ್ಐ, ವೈರ್ ಲೆಸ್, ರಾಮ, ಎಎಸ್ಐ, ನಾಗರಾಜ್ ಅಂಜಪ್ಪ, ಎಸ್ಪಿ ಕಮಾಂಡೆಂಟ್ ಸಿಬ್ಬಂದಿ, ಸಿ.ವಿ ಗೊವಿಂದರಾಜು, ಹೆಡ್ ಕಾನ್ಸ್ ಟೇಬಲ್, ಮಣಿಕಂಠ ಮಂದರ್ ಬೈಲ್, ಹೆಡ್ ಕಾನ್ಸ್ ಟೇಬಲ್, ಸಮಂತ್ ಎಸ್, ಎಎಸ್ಐ, ನರಸಿಂಹರಾಜು ಎಸ್.ಎನ್, ಹೆಡ್ ಕಾನ್ಸ್ ಟೇಬಲ್, ಪುಂಡಲಿಕ್ ಜೆ.ವಿ ರಾಮ್ ರಾವ್ ನಾಯಕ್, ಎಸ್.ಐ ಇವರಿಗಳಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.