ಗಾಳಿಪಟ -2 ನಿಂದ ಶರಣ್, ರಿಷಿ ಔಟ್​, ಗಣೇಶ್, ದಿಗಂತ್ ಇನ್..!

Date:

ಗೋಲ್ಡನ್ ಸ್ಟಾರ್ ಗಣೇಶ್, ದೂದ್​ಪೇಡ ದಿಗಂತ್, ಗಾಯಕ ರಾಜೇಶ್ ಕೃಷ್ಣನ್ ಅಭಿನಯದ ಗಾಳಿಪಟ ಸಿನಿಮಾವನ್ನು ನೀವೆಲ್ಲಾ ನೋಡಿದ್ದೀರಿ. 2008ರಲ್ಲಿ ಬಂದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಯೋಗರಾಜ್​ ಭಟ್ಟರು ನಿರ್ದೇಶನದ ಈ ಸಿನಿಮಾ ತೆರೆಕಂಡು ದಶಕ ಕಳೆದಿದೆ..! ಈಗ ಭಟ್ಟರು ಈ ಸಿನಿಮಾದ ಸಿಕ್ವೇಲ್ ನಿರ್ದೇಶಿಸಲು ಮುಂದಾಗಿದ್ದಾರೆ.
ಗಾಳಿಪಟ 2 ಸಿನಿಮಾ ಬರ್ತಿರೋ ವಿಷಯ ಗೊತ್ತೇ ಇದೆ. ಈ ಹಿಂದೆಯೇ ಇದು ಅನೌನ್ಸ್ ಆಗಿದೆ. ಗಣೇಶ್, ದಿಗಂತ್, ರಾಜೇಶ್​ಕೃಷ್ಣನ್ ಬದಲಿಗೆ ಶರಣ್, ರಿಷಿ, ಪವನ್​ಕುಮಾರ್ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಇನ್ನೇನು ಸಿನಿಮಾ ಶೂಟಿಂಗ್ ಶುರುವಾಗಬೇಕಿತ್ತು.. ಅಷ್ಟರಲ್ಲಿ.. ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಬಂದಿದೆ..! ಅದೇ ಶರಣ್, ರಿಷಿ ಔಟ್​ ಆಗಿದ್ದಾರೆ..! ಈ ಸ್ಥಾನಕ್ಕೆ ಗಾಳಿಪಟದ ಗಣಿ ಮತ್ತು ದಿಗ್ಗಿಯೇ ಬಂದಿದ್ದಾರೆ. ರಾಜೇಶ್ ಕೃಷ್ಣನ್​ ಜಾಗಕ್ಕೆ ಪವನ್​ ಕುಮಾರ್ ಉಳಿದುಕೊಂಡಿದ್ದಾರೆ.

ಕೆಲ ದಿನಗಳಿಂದ ನಟರ ಆಯ್ಕೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿದ್ದವು. ಈಗ ತಂಡದಲ್ಲಿ ಬದಲಾವಣೆ ಆಗಿದೆ. ನಿರ್ಮಾಪಕ ಮಹೇಶ್ ಈ ಬಗ್ಗೆ ತಿಳಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲೇ ಗಾಳಿಪಟ 2 ನಿರ್ಮಾಣ ಮಾಡುವುದಾಗಿ ಘೋಷಿಸಿದ್ದೇವು. ಇನ್ನು ಶರಣ್ ಮತ್ತು ರಿಷಿ ಆಯ್ಕೆ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ ಚಿತ್ರತಂಡ ಆಯ್ಕೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...