ಗಿಲ್ ಆಯ್ಕೆಗೆ ಕಾರಣ ಏನ್ ಗೊತ್ತಾ?

0
108

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪೃಥ್ವಿ ಶಾ ಬದಲು ಶುಭ್ಮನ್ ಗಿಲ್ ಕಣಕ್ಕಿಳಿಯಲಿ ಎಂಬ ಅಭಿಪ್ರಾಯ ಕೆಲ ಪ್ರಮುಖ ವಿಶ್ಲೇಷಕರಿಂದ ಕೇಳಿ ಬಂದಿತ್ತು. ಪೃಥ್ವಿ ಶಾ ಮೊದಲ ಟೆಸ್ಟ್ ಪಂದ್ಯದಲ್ಲಿ ವೈಫಲ್ಯವಾದ ಬಳಿಕವಂತೂ ಈ ಕೂಗು ಮತ್ತಷ್ಟು ಹೆಚ್ಚಾಯಿತು. ಈಗ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ತಂಡವನ್ನು ಪ್ರಕಟಗೊಳಿಸಲಾಗಿದ್ದು ಶುಭ್ಮನ್ ಗಿಲ್ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾವನ್ನು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಲು ಸಜ್ಜಾಗಿದ್ದಾರೆ.

ಹಾಗಾದರೆ ಶುಭ್ಮನ್ ಗಿಲ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಹಾಗೂ ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾ ವಿಶ್ಲೇಷಕರಿಂದ ಬೆಂಬಲವನ್ನು ಪಡೆಯಲು ಕಾರಣವೇನು? ಯುವ ಆಟಗಾರನ ಮೇಲೆ ಟಷ್ಟೋಂದುಭರವಸೆಗೆ ಕಾರಣವೇನು ಎಂಬುದು ನೋಡಲು ಹೋದರೆ ದೊರೆಯುವ ಉತ್ತರ ಶುಭ್ಮನ್ ಗಿಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೀಡಿದ ಪ್ರದರ್ಶನ.
ಅಂಡರ್ 19 ತಂಡದ ಮೂಲಕ ಕ್ರಿಕೆಟ್‌ನಲ್ಲಿ ಮಿಂಚಲು ಆರಂಭಿಸಿದ ಶುಭ್ಮನ್ ಗಿಲ್ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಲು ಆರಂಭಿಸಿದರು. ಇಲ್ಲಿ ಶುಭ್ಮನ್ ಗಿಲ್ ಶ್ರೇಷ್ಠ ಮಟ್ಟದ ಪ್ರದರ್ಶನವನ್ನು ನೀಡಲು ಆರಂಭಿಸಿದರು. ಈ ಮೂಲಕ ಅವರು ತಾನು ಭವಿಷ್ಯದ ತಾರೆ ಎಂಬುದನ್ನು ಸಾರಿದರು.
ಶುಭ್ಮನ್ ಗಿಲ್ ಈವರೆಗೆ 23 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 7 ಶತಕ ಹಾಗೂ 11 ಅರ್ಧ ಶತಕವನ್ನು ಬಾರಿಸಿ ಮಿಂಚಿದ್ದು 2270 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಿಲ್ 68.78ರ ಸರಾಸರಿಯಲ್ಲಿ ರನ್ ಗಳಿಸಿದ್ದು ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆಗೂ ಮುನ್ನ ಪ್ರಥಮ ದರ್ಜೆ ಕ್ರಿಕೆಟ್‌ನ ಎರಡನೇ ಅತಿ ಹೆಚ್ವಿನ ರನ್ ಸರಾಸರಿ ಹೊಂದಿದ ಆಟಗಾರ ಎನಿಸಿದ್ದಾರೆ. 88.37ರ ಸರಾಸರಿಯಲ್ಲಿ ವಿನೋದ್ ಕಾಂಬ್ಳಿ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಮುನ್ ರನ್ ಗಳಿಸಿರುವುದು ಈವರೆಗಿನ ದಾಖಲೆಯಾಗಿದೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಲ್ ಗಿಟ್ಟಿಸಕೊಂಡಿದ್ದಾರೆ. ಟೀಮ್ ಇಂಡಿಯಾದಲ್ಲೂ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಉತ್ತಮ ಆರಂಭವನ್ನು ನೀಡುವ ಗುರಿ ಗಿಲ್ ಮುಂದಿದೆ.

2022 ರಿಂದ IPLನಲ್ಲಿ 10 ತಂಡಗಳು!

ಇಂಡಿಯನ್ ಪ್ರೀಮಿಯರ್‌ ಲೀಗ್‌(ಐಪಿಎಲ್‌) 2022ರ ಆವೃತ್ತಿಯಿಂದ ಒಟ್ಟು ಹತ್ತು ತಂಡಗಳು ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಒಪ್ಪಿಗೆ ಸೂಚಿಸಿತು.
ಹದಿನಾಲ್ಕನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎಂಟು ತಂಡಗಳ ಜತೆಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, 2021ರ ಐಪಿಎಲ್‌ ಆರಂಭವಾಗಲು ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ ಸಮ್ಮತಿ ಸೂಚಿಸಿಲ್ಲ ಎಂಬ ಬಗ್ಗೆ ಇತ್ತೀಚೆಗೆ ಉನ್ನತ ಮೂಲಗಳು ತಿಳಿಸಿದ್ದವು.
ಆದರೆ, ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಇನ್ನೂ ಎರಡು ಫ್ರಾಂಚೈಸಿಗಳನ್ನು ಐಪಿಎಲ್‌ ಟೂರ್ನಿಗೆ ಸೆರ್ಪಡೆ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅದರಂತೆ, 2022ರ ಐಪಿಎಲ್‌ ಆವೃತ್ತಿಗೆ ಎರಡು ಹೊಸ ತಂಡಗಳನ್ನು ಪರಿಚಯಿಸುವುದಕ್ಕೆ ಬಿಸಿಸಿಐ ಗ್ರೀನ್‌ ಸಿಗ್ನಲ್‌ ನೀಡಿತು.
“ಹೊಸದಾಗಿ ಎರಡು ತಂಡಗಳನ್ನು 2022ರ ಐಪಿಎಲ್‌ ಟೂರ್ನಿಗೆ ಪರಿಚಯ ಮಾಡಲಾಗುತ್ತದೆ,” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೇಶಿ ಕ್ರಿಕೆಟ್‌ನ ಎಲ್ಲಾ ಟೂರ್ನಿಗಳು ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಎಲ್ಲಾ ಪುರುಷ ಹಾಗೂ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ನಿರ್ದೇಶಕರನ್ನಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರನ್ನೆ ಮುಂದುವರಿಸಲು ವಾರ್ಷಿಕ ಸಭೆ ಸಹಮತ ಸೂಚಿಸಿತು. ಇನ್ನು ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು ಪರ್ಯಾಯ ನಿರ್ದೇಶಕರಾಗಿರುತ್ತಾರೆ ಮತ್ತು ಜಾಗತಿಕ ಮಂಡಳಿಯ ಮುಖ್ಯ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಭಾರತದ ಪ್ರತಿನಿಧಿಯಾಗಲಿದ್ದಾರೆ.

 

LEAVE A REPLY

Please enter your comment!
Please enter your name here