No menu items!
9.3 C
Munich
Wednesday, April 29, 2026

2022 ರಿಂದ IPLನಲ್ಲಿ 10 ತಂಡಗಳು!

Must read

2022 ರಿಂದ IPLನಲ್ಲಿ 10 ತಂಡಗಳು!

ಇಂಡಿಯನ್ ಪ್ರೀಮಿಯರ್‌ ಲೀಗ್‌(ಐಪಿಎಲ್‌) 2022ರ ಆವೃತ್ತಿಯಿಂದ ಒಟ್ಟು ಹತ್ತು ತಂಡಗಳು ಟೂರ್ನಿಯಲ್ಲಿ ಭಾಗವಹಿಸುವುದಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಒಪ್ಪಿಗೆ ಸೂಚಿಸಿತು.
ಹದಿನಾಲ್ಕನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಎಂಟು ತಂಡಗಳ ಜತೆಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, 2021ರ ಐಪಿಎಲ್‌ ಆರಂಭವಾಗಲು ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ ಸಮ್ಮತಿ ಸೂಚಿಸಿಲ್ಲ ಎಂಬ ಬಗ್ಗೆ ಇತ್ತೀಚೆಗೆ ಉನ್ನತ ಮೂಲಗಳು ತಿಳಿಸಿದ್ದವು.
ಆದರೆ, ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಇನ್ನೂ ಎರಡು ಫ್ರಾಂಚೈಸಿಗಳನ್ನು ಐಪಿಎಲ್‌ ಟೂರ್ನಿಗೆ ಸೆರ್ಪಡೆ ಮಾಡುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಅದರಂತೆ, 2022ರ ಐಪಿಎಲ್‌ ಆವೃತ್ತಿಗೆ ಎರಡು ಹೊಸ ತಂಡಗಳನ್ನು ಪರಿಚಯಿಸುವುದಕ್ಕೆ ಬಿಸಿಸಿಐ ಗ್ರೀನ್‌ ಸಿಗ್ನಲ್‌ ನೀಡಿತು.
“ಹೊಸದಾಗಿ ಎರಡು ತಂಡಗಳನ್ನು 2022ರ ಐಪಿಎಲ್‌ ಟೂರ್ನಿಗೆ ಪರಿಚಯ ಮಾಡಲಾಗುತ್ತದೆ,” ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.
ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದೇಶಿ ಕ್ರಿಕೆಟ್‌ನ ಎಲ್ಲಾ ಟೂರ್ನಿಗಳು ಸ್ಥಗಿತವಾದ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನ ಎಲ್ಲಾ ಪುರುಷ ಹಾಗೂ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ನಿರ್ದೇಶಕರನ್ನಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರನ್ನೆ ಮುಂದುವರಿಸಲು ವಾರ್ಷಿಕ ಸಭೆ ಸಹಮತ ಸೂಚಿಸಿತು. ಇನ್ನು ಬಿಸಿಸಿಐ ಕಾರ್ಯದರ್ಶಿ ಜೇ ಶಾ ಅವರು ಪರ್ಯಾಯ ನಿರ್ದೇಶಕರಾಗಿರುತ್ತಾರೆ ಮತ್ತು ಜಾಗತಿಕ ಮಂಡಳಿಯ ಮುಖ್ಯ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಭಾರತದ ಪ್ರತಿನಿಧಿಯಾಗಲಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article