ಗುಟ್ಟಾಗಿ ಮದುವೆಯಾದ ನಟಿ ಪ್ರಣೀತಾ! ಫೊಟೋ ಲೀಕ್

Date:

ಕನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಗುಟ್ಟಾಗಿ ವಿವಾಹವಾಗಿದ್ದಾರೆ. ಪ್ರಣಿತಾ ವಿವಾಹದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಟಿ ಪ್ರಣಿತಾ ಸುಭಾಷ್ ಇತ್ತೀಚೆಗಷ್ಟೆ ಕನಕಪುರ ರಸ್ತೆಯ ರೆಸಾರ್ಟ್‌ ಒಂದರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉದ್ಯಮಿಯೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಪ್ರಣಿತಾ ಮದುವೆಯಾಗಿರುವ ವ್ಯಕ್ತಿಯ ಹೆಸರು ನಿತಿನ್ ರಾಜು ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಶಾಪಿಂಗ್ ಹೊಂದಿದ್ದು ಇತರೆ ಬ್ಯುಸಿನೆಸ್‌ಗಳನ್ನು ಸಹ ಅವರು ಹೊಂದಿದ್ದಾರೆ.

ಕೆಲವು ದಿನಗಳ ಹಿಂದೆಯೇ ಪ್ರಣಿತಾ ಮದುವೆ ಸುದ್ದಿ ವೈರಲ್ ಆಗಿತ್ತು, ಆಗ ತಮ್ಮನ್ನು ಸಂಪರ್ಕಿಸಿದ್ದ ಮಾಧ್ಯಮದವರಿಗೆ ‘ನಾನು ಮದುವೆ ಆಗಿಲ್ಲ. ಹಾಗೇನಾದರೂ ಮದುವೆ ಆದರೆ ಖಂಡಿತ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ’ ಎಂದಿದ್ದರು. ಆದರೆ ಈಗ ಪ್ರಣಿತಾ ಮದುವೆ ಆಗಿರುವುದು ಖಾತ್ರಿಯಾಗಿದೆ. ಈ ಬಗ್ಗೆ ಪ್ರಣಿತಾ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಮದುವೆ ವಿಷಯವನ್ನು ಬಹಳ ಗುಟ್ಟಾಗಿ ಇಡಬೇಕೆಂದು ಪ್ರಣಿತಾ ಯತ್ನಿಸಿದ್ದರು. ಆದರೆ ಮದುವೆಗೆ ಹಾಜರಾಗಿದ್ದ ಕುಟುಂಬ ಸದಸ್ಯರೊಬ್ಬರು ಮದುವೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗುಟ್ಟು ಬಹಿರಂಗವಾಗಿದೆ.

ಕನ್ನಡದ ‘ಪೊರ್ಕಿ’ ಸಿನಿಮಾದಿಂದ ನಟನೆ ಆರಂಭಿಸಿದ ಪ್ರಣಿತಾ ಸುಭಾಷ್ ಕನ್ನಡ, ತೆಲುಗು, ತಮಿಳು ಈಗ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಅಜಯ್ ದೇವಗನ್ ನಟನೆಯ ಭುಜ್ ಹಾಗೂ ಪರೇಶ್ ರಾವಲ್, ಶಿಲ್ಪಾ ಶೆಟ್ಟಿ ನಟನೆ ‘ಹಂಗಾಮಾ 2’ ಸಿನಿಮಾದಲ್ಲಿ ಪ್ರಣಿತಾ ನಟಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...