ಐದು ದಿನಗಳ ನಿರಂತರ ಏರಿಕೆ ನಂತರ ಗುರುವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ಕುಸಿದಿದ್ದು, ಗುರುವಾರ ಎಲ್ಲಾ ಪ್ರಮುಖ ನಗರಗಳಲ್ಲಿ ಬೆಲೆ ಇಳಿಕೆಯಾಗಿದೆ.

ಆಗಸ್ಟ್ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿತ್ತು. ನಂತರ ಚೇತರಿಸಿಕೊಂಡು, ಕಳೆದ ವಾರದಿಂದ ನಿರಂತರ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಬೆಳ್ಳಿ ಬೆಲೆ ಕೂಡ ಇಳಿಕೆಯಾಗಿದೆ. ಗುರುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 19ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 200 ರೂ ಇಳಿಕೆ ಕಂಡು 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 210 ರೂ ಇಳಿಕೆಯಾಗಿ 50,450 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.44% ರಷ್ಟು ಇಳಿಕೆಯಾಗಿ 1,779.66 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.15%ರಷ್ಟು ಇಳಿಕೆಯಾಗಿ 23.23 ಯುಎಸ್ ಡಾಲರ್ ಆಗಿದೆ..