ಗುರುವಾರ ರಾಯರು ಮಾತ್ರವಲ್ಲ ಈ ದೇವರನ್ನು ಪೂಜಿಸಿ: ಹಾಗಿದ್ರೆ ಗುರುಬಲಕ್ಕೆ ಹೀಗೆ ಮಾಡಿ!
ಹಿಂದೂಗಳು ವಿವಿಧ ರೂಪಗಳಲ್ಲಿ ವಿವಿಧ ದೇವರನ್ನು ಪೂಜಿಸುತ್ತಾರೆ. ತಮ್ಮ ದೇವತೆಗಳನ್ನು ಒಲಿಸಿಕೊಳ್ಳುವ ಸಲುವಾಗಿ ಅವರು ಹಲವಾರು ಆಚರಣೆಗಳನ್ನು ಮಾಡುತ್ತಾರೆ ಮತ್ತು ತಮ್ಮ ದೇವರಿಗೆ ಅರ್ಪಣೆಗಳನ್ನು ಮಾಡುತ್ತಾರೆ. ಆದರೆ ಹಿಂದೂ ಪುರಾಣಗಳಲ್ಲಿ ವಾರದ ಪ್ರತಿ ದಿನವೂ ವಿವಿಧ ದೇವರುಗಳಿಗೆ ಸಮರ್ಪಿತವಾಗಿದೆ. ಇದಷ್ಟೇ ಅಲ್ಲ, ಪ್ರತಿದಿನವೂ ತನ್ನದೇ ಆದ ಆಚರಣೆಗಳು ಮತ್ತು ವಿಧಾನಗಳನ್ನು ಹೊಂದಿದ್ದು, ದೇವರನ್ನು ಪೂಜಿಸಿ, ಅವರನ್ನು ಪ್ರಸನ್ನಗೊಳಿಸುವ ವಿಧಾನಗಳಿವೆ.
ಗುರುವಾರ ಕೇವಲ ರಾಯರನ್ನು ಮಾತ್ರವಲ್ಲ, ಸಾಯಿಬಾಬರನ್ನು ಪೂಜಿಸಿದರೂ ಕೂಡ ವಿಶೇಷ ಫಲವನ್ನು ಪಡೆದುಕೊಳ್ಳಬಹುದು. ಆದರೆ ಗುರುವಾರವು ಭಗವಾನ್ ವಿಷ್ಣು ದೇವರಿಗೆ ಅರ್ಪಿತವಾದ ದಿನವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ
ಭಗವಾನ್ ವಿಷ್ಣುವನ್ನು ತ್ರಿದೇವ ಎಂದು ಕರೆಯುತ್ತಾರೆ. ಗುರುವಾರವನ್ನು ಬೃಹಸ್ಪತಿವಾರವೆಂದು ಕರೆಯಲಲಾಗಿದ್ದು, ಇದನ್ನು ಭಗವಾನ್ ವಿಷ್ಣು ಇಲ್ಲವೇ ಭಗವಾನ್ ಬೃಹಸ್ಪತಿಗೆ ಮೀಸಲಾಗಿದೆ. ನೋಡಲು ಮಾನವ ದೇಹವನ್ನು ಹೊಂದಿದ್ದರೂ ವಿಷ್ಣು ನಾಲ್ಕು ಕೈಗಳನ್ನು ಹೊಂದಿದ್ದಾನೆ. ನಾಲ್ಕು ಕೈಗಳಲ್ಲೂ ವಿಭಿನ್ನ ರೀತಿಯ ಆಯುಧಗಳನ್ನು ಹಿಡಿದುಕೊಂಡಿದ್ದಾನೆ. ಕ್ಷೀರಸಾಗರದಲ್ಲಿ ದೈತ್ಯ ಶೇಷನಾಗನ ಮೇಲೆ ಮಲಗಿ ವಿಶ್ರಮಿಸುವನು ಭಗವಾನ್ ವಿಷ್ಣು. ವಿಷ್ಣುವಿನ ಪತ್ನಿ ದೇವಿ ಲಕ್ಷ್ಮಿಯಾಗಿದ್ದು, ಈಕೆಯನ್ನು ಧನಸಂಪತ್ತಿನ ಅಧಿಪತಿಯೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಗುರುವಾರ ಮತ್ತು ಶುಕ್ರವಾರದಂದು ಭಗವಾನ್ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮಿ ದೇವಿಯನ್ನು ಜೊತೆಯಾಗಿ ಪೂಜಿಸಿದರೆ ಧನ, ಸಂಪತ್ತು, ಸಂತೋಷ, ಶಾಂತಿ ಹಾಗೂ ಜ್ಞಾನ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ.
ಭಗವಾನ್ ವಿಷ್ಣುವಿಗೆ ಹಳದಿ ಬಣ್ಣವೆಂದರೆ ಬಲು ಪ್ರೀತಿ. ಅಷ್ಟು ಮಾತ್ರವಲ್ಲ, ವಿಷ್ಣು ದೇವರನ್ನು ಮೆಚ್ಚಿಸುವುದು ಕೂಡ ತುಂಬಾ ಸುಲಭ.
1) ಗುರುವಾರದಂದು ವಿಷ್ಣು ಭಕ್ತರು ಅಥವಾ ವಿಷ್ಣುವನ್ನು ಆರಾದಿಸುವವರು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುಚಿಯಾಗಿ ವಿಷ್ಣುವಿಗೆ ಪ್ರಿಯವಾದ ಹಳದಿ ಬಟ್ಟೆಯನ್ನು ಧರಿಸಬೇಕು. ವಿಷ್ಣುವಿನ ಪೂಜೆಯಲ್ಲಿ ಮಾತ್ರವಲ್ಲ, ಹಿಂದೂ ಧರ್ಮದಲ್ಲಿ ಅರಶಿಣಕ್ಕೆ ಅದರದ್ದೇ ಮಹತ್ವವಿದೆ.
2) ನಂತರ ವಿಷ್ಣುವಿನ ವಿಗ್ರಹವನ್ನು ಹಾಗೂ ಲಕ್ಷ್ಮಿ ವಿಗ್ರಹವನ್ನು ಶುಚಿಗೊಳಿಸಿ. ಪೂಜೆಯಲ್ಲಿ ವಿಷ್ಣುವಿಗೆ ಹೆಚ್ಚು ಅರಶಿಣ ಬಣ್ಣದ ಹೂವುಗಳನ್ನು, ಅರಶಿಣ ಬಣ್ಣದ ವಸ್ತುಗಳನ್ನು ಅರ್ಪಿಸಿ. ವಿಷ್ಣುವಿನೊಂದಿಗೆ ಲಕ್ಷ್ಮಿ ದೇವಿಯನ್ನು ಆರಾಧಿಸಿ. ಈ ದಿನ ವ್ರತವನ್ನು ಕೈಗೊಳ್ಳುವವರು ತುಪ್ಪದಿಂದ ತಯಾರಿಸಿದ ಆಹಾರವನ್ನು ಸೇವಿಸಿ.
3) ಇಂದು ವಿಷ್ಣುವಿಗೆ ಹಳದಿ ಬಣ್ಣದ ಬೇಳೆ ಕಾಳುಗಳನ್ನು ಹಾಗೂ ಬೆಲ್ಲವನ್ನು ಅರ್ಪಿಸಬೇಕು.
ಧರ್ಮಗ್ರಂಥಗಳಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿ ಗ್ರಹದ ಅನುಕೂಲವನ್ನು ಪಡೆಯಲು ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಈ ಕೆಳಗಿನ ಕೆಲಸಗಳನ್ನು ಗುರುವಾರ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ ಮತ್ತು ಧರ್ಮಗ್ರಂಥ ಹೇಳುತ್ತದೆ. ಅವುಗಳು ಯಾವುವು ನೋಡಿ:
1) ಗುರು ಹಿರಿಯರು, ಪೋಷಕರು ಹಾಗೂ ಸಂತರು ಬೃಹಸ್ಪತಿಯನ್ನು ಪ್ರತಿನಿಧಿಸುತ್ತಾರೆ. ಹಾಗಾಗಿ ಗುರುವಾರ ಮಾತ್ರವಲ್ಲ, ಯಾವ ದಿನವೂ ಕೂಡ ಇವರನ್ನು ಅವಮಾನಿಸಬಾರದು.
2) ಗುರುವಾರದಂದು ಮನೆಯಲ್ಲಿ ಕಿಚಡಿ ಮಾಡಬಾರದು ಹಾಗೂ ಸೇವಿಸಲೂ ಬಾರದು.
3) ಗುರುವಾರದಂದು ಮಹಿಳೆಯರು ತಮ್ಮ ತಲೆಕೂದಲನ್ನು ತೊಳೆಯಬಾರದು. ಇದರಿಂದ ಸಂಪತ್ತು, ಸಮೃದ್ಧಿ ಹಾಗೂ ಸಂತೋಷ ಕಡಿಮೆಯಾಗುತ್ತದೆ ಮತ್ತು ಗುರುಬಲ ಕಡಿಮೆಯಾಗುತ್ತದೆ ಎನ್ನಲಾಗಿದೆ.
4) ಗುರುವಾರದಂದು ಮನೆಯಲ್ಲಿ ಉಗುರುಗಳನ್ನು ಕತ್ತರಿಸಬಾರದು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸಬಹುದು.
5) ಗುರುವಾರದ ದಿನ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ತಲೆ ಕೂದಲನ್ನು ಕತ್ತರಿಸಬಾರದು. ಇದು ಗುರುಬಲವನ್ನು ದುರ್ಬಲಗೊಳಿಸುತ್ತದೆ ಮತ್ತು ಜೀವನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತದೆ.
ಗುರುವಾರವಾದ ಇಂದು ಮತ್ತು ನಾಳೆ ವಿಷ್ಣುವನ್ನು ಹಾಗೂ ಲಕ್ಷ್ಮಿ ದೇವಿಯನ್ನು ಆರಾಧಿಸಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ಕಂಡುಕೊಳ್ಳಿ.