ಉಪ ಚುನಾವಣೆ ಫಲಿತಾಂಶ ಬಂದಾಗಿನಿಂದಲೂ ಯಡಿಯೂರಪ್ಪ ಅವರ ಮೇಲೆ ಸಚಿವ ಆಕಾಂಕ್ಷಿಗಳು ಹೊರೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇತ್ತು ಹಲವಾರು ಜನ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿತ್ತು ಇದೀಗ ಸ್ಥಿರ ಸರ್ಕಾರ ಬಂದ ಮೇಲೆ ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಬಿಎಸ್ ವೈ ಹೇಳಿದ್ದರು, ಕೊಡದಿದ್ದರೆ ಅವರಿಗೆ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಪಟ್ಟ ಕೊಡಬೇಕಾಗುತ್ತದೆ ಎಂದು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದ್ದಾರೆ, ಅನರ್ಹ ಶಾಸಕರನ್ನು ಅರ್ಹರನ್ನಾಗಿಸುವಲ್ಲಿ ನಮ್ಮ ಸಮುದಾಯ ಪ್ರಮುಖ ಪಾತ್ರ ವಹಿಸಿದೆ,

ಹೀಗಾಗಿ ಅಸಂಘಟಿತ ಸಮುದಾಯವನ್ನು ಸಂಘಟಿರನ್ನಾಗಿಸುವ ನಿಟ್ಡಿನಲ್ಲಿ ನಮ್ಮು ಸಮುದಾಯದಿಂದ ಆಯ್ಕೆಯಾಗಿರುವ ಮಾಜಿ ಸಚಿವ ದಿವಂಗತ ಎ. ಕೃಷ್ಣಪ್ಪ ಅವರ ಪುತ್ರಿ ಹಿರಿಯೂರಿನ ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು,ಒಂದು ವೇಳೆ ನೀಡದಿದ್ದಾರೆ ಮತ್ತೊಮ್ಮೆ ನಮ್ಮ ಸಮುದಾಯದ ರಾಜ್ಯ ಮಟ್ಟದ ನಾಯಕರು ಬಿಎಸ್ ವೈ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ, ಒಂದು ವೇಳೆ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳದಿದ್ದರೆ ಅವರಿಗೆ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಪಟ್ಟ ಕೊಡುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ .






