ಗೋಡಂಬಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ!

Date:

ಗೋಡಂಬಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ!

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗೋಡಂಬಿ ತಿಂದರೆ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಪ್ರತಿದಿನ ಗೋಡಂಬಿ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ವಿವಿಧ ರೋಗಗಳಿಂದ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಗೋಡಂಬಿ ಮರಗಳಲ್ಲಿ ಇದರ ಹಣ್ಣು ನೇತಾಡುತ್ತಿರುತ್ತದೆ.
ಹಣ್ಣಿನ ಕೆಳಭಾಗದಲ್ಲಿ ಗೋಡಂಬಿ ಇರುತ್ತದೆ. ವರ್ಷ ಪೂರ್ತಿ ಹಣ್ಣು ಹಾಗೂ ಗೋಡಂಬಿ ಲಭ್ಯವಿದ್ದು, ಇದರಿಂದ ಹಲವು ಲಾಭಗಳಿವೆ. ಗೋಡಂಬಿ ತಿಂದರೆ ಮನುಷ್ಯ ದಪ್ಪಗಾಗುತ್ತರೆಂದು ಹಲವರು ಹೇಳುತ್ತಾರಾದರೂ, ಇದರಿಂದ ಆರೋಗ್ಯದ ಮೇಲೆ ಅನೇಕ ಲಾಭಗಳೂ ಸಹ ಇದೆ.
ಸಹಾಯಕವಾದ ಫೈಬರ್‌ಗಳನ್ನು ಹೊಂದಿದೆ
ಗೋಡಂಬಿ ಅಥವಾ ಕ್ಯಾಶೀವ್ ನಟ್‌ಗಳಲ್ಲಿ ಆಹಾರದ ಫೈಬರ್ ಅಂಶ ಹೊಂದಿದ್ದು, ಇದನ್ನು ನಮ್ಮ ದೇಹ ಉತ್ಪಾದನೆ ಮಾಡದ ಕಾರಣ ಅದನ್ನು ಹೊರಗಿನಿಂದ ಸೇವಿಸಬೇಕಾಗುತ್ತದೆ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗಲಿದ್ದು, ಜೀರ್ಣಾಂಗ ಸಂಬಂಧಿ ರೋಗಗಳನ್ನು ಕಡಿಮೆ ಮಾಡುತ್ತದೆ.

ಹೃದಯ ರೋಗವನ್ನು ನಿಯಂತ್ರಣದಲ್ಲಿಡುತ್ತದೆ
ಗೋಡಂಬಿ ಎಲ್‌ಡಿಎಲ್‌ ಕೊಲೆಸ್ಟರಾಲ್‌ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಎಚ್‌ಡಿಎಲ್‌ ಕೊಲೆಸ್ಟರಾಲ್‌ ಒಯ್ಯುವ ಸಾಮಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ರೋಗ ಬರುವ ಅಪಾಯವನ್ನು ತಗ್ಗಿಸುತ್ತದೆ. ಆದರೆ, ಉಪ್ಪು ಅಂಶ ಹೆಚ್ಚಿರುವ ಅಥವಾ ಹುರಿದ ಗೋಡಂಬಿಯಲ್ಲದಂತೆ ನೋಡಿಕೊಳ್ಳಿ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ
ಗೋಡಂಬಿಯಲ್ಲಿ ಒಮೆಗಾ 3 ಅಂಶವಿರುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇನ್ನು, ಹಸಿವಾದಾಗ ಬೊಗಸೆಯಷ್ಟು ಗೋಡಂಬಿ ತಿಂದರೆ
ಅದರಿಂದ ಹೆಚ್ಚು ಕಾಲ ಹೊಟ್ಟೆ ತುಂಬುವಂತೆಯೂ ನೋಡಿಕೊಳ್ಳುತ್ತದೆ.

ಕಣ್ಣಿಗೆ ಸೋಂಕು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ
ವಾತಾವರಣದಲ್ಲಿ ಹೆಚ್ಚು ಮಾಲಿನ್ಯವಿದ್ದರೂ ಸಹ ಗೋಡಂಬಿಯನ್ನುತಿನ್ನುವುದರಿಂದ ಕಣ್ಣಿಗೆ ಸೋಂಕು ಬರದಂತೆ ತಡೆಯುತ್ತದೆ. ಯಾಕೆಂದರೆ ಇದು ಪ್ರಬಲ ಆ್ಯಂಟಿಆಕ್ಸಿಡೆಂಟ್ ಪಿಗ್ಮೆಂಟ್ ಹೊಂದಿದೆ. ಹೀಗಾಗಿ, ರೆಟಿನಾ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿ ಮಾಡಲಿದ್ದು, ಇದರಿಂದ ಹಾನಿಕರ ಯುವಿ ಕಿರಣಗಳನ್ನು ತಡೆಯುತ್ತದೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...