ಗೋಡಂಬಿ ತಿನ್ನೋದ್ರಿಂದ ದೇಹಕ್ಕಾಗುವ ಬೆನಿಫಿಟ್ ಎಷ್ಟು ಗೊತ್ತಾ!? ಇದನ್ನು ನೀವು ತಿಳಿಯಿರಿ!
ಗೋಡಂಬಿ ಮತ್ತು ದ್ರಾಕ್ಷಿಗಳು ನಮಗೆ ಸಿಕ್ಕಂತಹ ಒಂದು ಅದ್ಬುತ ನೈಸರ್ಗಿಕ ಕೊಡುಗೆ ಎಂದರೆ ತಪ್ಪಾಗಲಾರದು. ಇವುಗಳನ್ನು ರುಚಿಗೆ ಅಥವಾ ಅಡುಗೆಯಲ್ಲಿ ಬಳಸುವುದರ ಹೊರತಾಗಿ ಇನ್ನಿತರ ಹಲವಾರು ಉಪಯೋಗಗಳಿವೆ. ಮೂತ್ರ ಪಿಂಡದ ಆಕಾರದಲ್ಲಿರುವ ಅದ್ಬುತವಾದ ಈ ಗೋಡಂಬಿಯು ನಮ್ಮ ಆರೋಗ್ಯಕ್ಕೆ ಹೇಗೆ ಉಪಯೋಗಕಾರಿ ಎನ್ನುವುದರ ಬಗ್ಗೆ ವೈದ್ಯರು ಏನನ್ನುತ್ತಾರೆ ನೋಡೋಣ ಬನ್ನಿ!
ಹೆಚ್ಚಿನ ಡ್ರೈಫ್ರೂಟ್ಸ್‌ಗಳಂತೆ, ಗೋಡಂಬಿ ಸಹ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ತೂಕ ನಷ್ಟ, ಸುಧಾರಿತ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಆರೋಗ್ಯಕರ ಹೃದಯದಂತಹ ಪ್ರಯೋಜನಗಳಿಗೆ ಇದು ಸಂಬಂಧಿಸಿದೆ.
ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಗೋಡಂಬಿಯು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ಇದರಲ್ಲಿರುವ ಮೊನೊಸಾಚುರೇಟೆಡ್ ಮತ್ತು ಪಾಲಿಅನ್‌ಸ್ಯಾಚುರೇಟೆಡ್ ಅಂಶಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್) ಮತ್ತು ಉತ್ತಮ ಕೊಲೆಸ್ಟ್ರಾಲ್ (ಎಚ್‌ಡಿಎಲ್) ಅನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ, ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಪೋಷಕಾಂಶ ಭರಿತವಾಗಿರುತ್ತವೆ: ಕಾಜು ಅಥವಾ ಗೋಡಂಬಿಯು ವಿಟಮಿನ್ ಬಿ6, ಇ, ಕೆ ಮತ್ತು ತಾಮ್ರ, ಫಾಸ್ಫರಸ್, ಸತು, ಮೇಗ್ನೆಶಿಯಮ್ ಮತ್ತು ಕಬ್ಬಿಣದಂತಹ ಅನೇಕ ರೀತಿಯ ಖನಿಜಗಳನ್ನು ಹೊಂದಿರುತ್ತವೆ. ಇವುಗಳು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳನ್ನು ನೀಡುತ್ತವೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಕಾಜುಗಳು ಬೇರೆ ಪದಾರ್ಥಗಳಿಗೆ ಹೋಲಿಸಿದರೆ ಕಡಿಮೆ ಗ್ಲೈಸೇಮಿಕ್ ಸೂಚ್ಯಂಕವನ್ನು ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗದಂತೆ ನಿಯಂತ್ರಿಸುತ್ತದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಾಜು ಒಂದೊಳ್ಳೆಯ ತಿಂಡಿಯಾಗಿದೆ ಅಂತ ಹೇಳಬಹುದು.
ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ: ಕಾಜುಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶವಾದ ಲೂಟಿನ್ ಮತ್ತು ಝಿಯಾಂಕ್ಸಿತಿನ್ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕಣ್ಣಿನ ಮೇಲೆ ಪೊರೆ ಬೆಳೆಯುವುದನ್ನು ಮತ್ತು ವಯಸ್ಸು ಸಂಬಂಧಿತ ಕಣ್ಣಿನ ಅಸ್ವಸ್ಥತೆಗಳನ್ನು ತಡೆಗಟ್ಟುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಗೋಡಂಬಿಯಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ನಿಯಮಿತ ಕರುಳಿನ ಚಲನೆಯನ್ನು ಸುಧಾರಿಸುವ ಮೂಲಕ ಸುಧಾರಿತ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತದೆ: ಗೋಡಂಬಿಯು ಮೆಗ್ನೀಸಿಯಮ್, ಕ್ಯಾಲ್ಸಿಯಮ್ ಮತ್ತು ಫಾಸ್ಪರಸ್‌ನ ಸಮೃದ್ಧ ಮೂಲವಾಗಿದೆ, ಇದು ಮೂಳೆಯ ಆರೋಗ್ಯಕ್ಕೆ ಪ್ರಮುಖವಾಗಿದೆ. ನೀವು ಮೂಳೆ ಅಥವಾ ಕೀಲು ಕಾಯಿಲೆಗಳಿಂದ ಬಳಲುತ್ತಿದ್ದರೆ ಗೋಡಂಬಿ ತಿನ್ನುವುದು ಪ್ರಯೋಜನಕಾರಿಯಾಗಿದೆ. ಗೋಡಂಬಿಯು ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿದ್ದು, ಇದು ನಿಮ್ಮ ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯೊಂದಿಗೆ ಕೆಲಸ ಮಾಡುತ್ತದೆ. ಗೋಡಂಬಿಯಲ್ಲಿರುವ ವಿಟಮಿನ್ ಕೆ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ನಾಯು ಮತ್ತು ನರ ಆರೋಗ್ಯವನ್ನು ಕಾಪಾಡುತ್ತದೆ: ಕಾಜುಗಳು ಮೆಗ್ನೀಸಿಯಮ್‌ನ ಸಮೃದ್ಧ ಮೂಲವಾಗಿದ್ದು, ಇದು ಸ್ನಾಯುವಿನ ಮತ್ತು ನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ
ಕ್ಯಾನ್ಸರ್ ರೋಗವನ್ನು ತಡೆಯುತ್ತದೆ: ಅಧ್ಯಯನಗಳು ಸೂಚಿಸುವಂತೆ ಗೊಂಡಂಬಿಗಳಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಫೈಟೋಕೆಮಿಕಲ್ಸ್ ವಿವಿಧ ರೀತಿಯ ಕ್ಯಾನ್ಸರ್ ಅಪಾಯಗಳನ್ನು ತಡೆಗಟ್ಟುತ್ತದೆ
ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ: ಕಾಜುವಿನಲ್ಲಿರುವ ವಿಟಮಿನ್ ಇ ಅಂಶವು ಆಂಟಿಆಕ್ಸಿಡೆಂಟ್ ಅನ್ನು ಹೊಂದಿದ್ದು, ಇದು ಚರ್ಮದ ಅಸ್ವಸ್ಥತೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಕೂದಲಿನ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಲು ತುಂಬಾನೇ ಸಹಾಯ ಮಾಡುತ್ತದೆ. ಇದಷ್ಟೇ ಅಲ್ಲದೆ, ಕಾಜು ತಿನ್ನುವುದರಿಂದ ಇನ್ನೂ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳಿವೆ ಅಂತ ಹೇಳಬಹುದು