ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ನೆಡೆಯಿತು ಅದು ಕಲ್ಲು ತೂರಾಟ ಬೆಂಕಿ ಹಲವು ರೀತಿಯಲ್ಲಿ ಜನ ಬೀದಿಗಿಳಿದಿದ್ದರು ಇದನ್ನು ನಿಯಂತ್ರಿಸಲು ಪೋಲಿಸರು ಗೋಲಿಬಾರ್ ಮಾಡಬೇಕಯಿತು ಇದಕ್ಕೆ ವಿರೋಧ ಪಕ್ಷದವರು ಭಾರಿ ವಿರೋಧ ವೆಕ್ತಪಡಿಸುತ್ತಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೋಲಿಬಾರ್‌ಗೆ ರಾಜ್ಯ ಸರಕಾರ ಅನುಮತಿ ನೀಡಿಲ್ಲ. ಗಲಭೆಗಳಿಗೆ ಪ್ರಚೋದನೆ ನೀಡುತ್ತಿರುವುದು ಕಾಂಗ್ರೆಸ್‌ನವರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದವರು, ಅನುಭವಿಗಳು. ಈ ರೀತಿ ಸರಕಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಬಾರದು ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಕೇರಳ ರಾಜ್ಯದ 30-40 ಮಂದಿ ಪತ್ರಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಪ್ಪು ಗ್ರಹಿಕೆಯಿಂದ ಹೇಳಲಾಗುತ್ತಿತ್ತು. ಆದರೆ, 7-8 ಮಂದಿಯನ್ನು ಮಾತ್ರ ಪತ್ರಕರ್ತರ ಗುರುತಿನ ಚೀಟಿ ಇಲ್ಲದೆ ಇದ್ದ ಕಾರಣ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು ಕೇರಳದ ಪತ್ರಕರ್ತರನ್ನು ಪೊಲೀಸ್ ಭದ್ರತೆಯೊಂದಿಗೆ ಅವರ ರಾಜ್ಯದ ಗಡಿಗೆ ಕಳುಹಿಸಲಾಗಿದೆ. ಮಂಗಳೂರಿಗೆ ಭೇಟಿ ನೀಡಿ ಬಂದ ಬಳಿಕ ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ವಿಚಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.