ಈ ಬಾರಿಯ ಮೈಸೂರಿನ ಯುವ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡುವ ಮುಖಾಂತರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಸರ್ಕಾರಿ ವೇದಿಕೆಯನ್ನು ತಮ್ಮ ವೈಯಕ್ತಿಕ ಕಾರಣಕ್ಕೆ ಬಳಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಚಂದನ್ ಶೆಟ್ಟಿ ಅವರ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕೆಲವೊಂದಷ್ಟು ದೂರುಗಳನ್ನು ದಾಖಲಿಸಲಾಗಿತ್ತು. ಇನ್ನು ದೂರು ದಾಖಲಾಗಿ ಹಲವು ದಿನಗಳೇ ಕಳೆದರೂ ಈ ಬಗ್ಗೆ ಯಾವುದೇ ರೀತಿಯ ಹೆಚ್ಚಿನ ಮಾಹಿತಿ ದೊರಕಿರಲಿಲ್ಲ ಆದರೆ ಇದೀಗ ಈ ವಿಷಯದ ಕುರಿತು ಎಸ್ಪಿ ರಿಷ್ಯಂತ್ ಅವರು ಮಾಹಿತಿ ನೀಡಿದ್ದಾರೆ.
ಹೌದು ಚಂದನ್ ಶೆಟ್ಟಿ ಯುವದಸರಾ ವೇದಿಕೆಯನ್ನು ತಪ್ಪಾಗಿ ಬಳಕೆ ಮಾಡಿದ್ದಕ್ಕೆ ನೀಡಿದ್ದ ದೂರಿನ ಕುರಿತು ಎಸ್ಪಿ ರಿಷ್ಯಂತ್ ಅವರು ಮಾತನಾಡಿದ್ದು , ಸರ್ಕಾರಿ ವೇದಿಕೆಯನ್ನು ಈ ರೀತಿ ಬಳಸಿಕೊಂಡಿದ್ದು ತಪ್ಪು ಇನ್ನು ಮುಂದೆ ಈ ರೀತಿಯ ತಪ್ಪು ನಡೆದರೆ ಶಾಶ್ವತವಾಗಿ ನಿಮ್ಮನ್ನು ಸರ್ಕಾರಿ ಕಾರ್ಯಕ್ರಮಗಳಿಂದ ಬ್ಯಾನ್ ಮಾಡುತ್ತೇವೆ ಎಂದು ವಾರ್ನಿಂಗ್ ನೀಡಿದ್ದಾರೆ. ಕೇವಲ ಚಂದನ್ ಶೆಟ್ಟಿ ಮಾತ್ರವಲ್ಲ ಯಾವುದೇ ಕಲಾವಿದ ಆದರೂ ಸರಿ ಸರ್ಕಾರಿ ವೇದಿಕೆಯನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡರೆ ಇದೇ ಗತಿ ಎಂದು ರಿಷ್ಯಂತ್ ಅವರು ಹೇಳಿದ್ದಾರೆ. ಇನ್ನು ಈ ಘಟನೆಯ ಕುರಿತು ಅಂತಿಮ ತೀರ್ಮಾನವನ್ನು ಜಿಲ್ಲಾಧಿಕಾರ ತೆಗೆದುಕೊಳ್ಳಲಿದೆ ಎಂದು ಸಹ ರಿಷ್ಯಂತ್ ಅವರು ತಿಳಿಸಿದರು.