ಚಳಿಗಾಲದ ಸಮಯದಲ್ಲಿ ಮೂಲಂಗಿಯನ್ನು ಏಕೆ ಸೇವಿಸಬೇಕು..? ಇಲ್ಲಿದೆ ಮಾಹಿತಿ

Date:

ಚಳಿಗಾಲದ ಸಮಯದಲ್ಲಿ ಮೂಲಂಗಿಯನ್ನು ಏಕೆ ಸೇವಿಸಬೇಕು..? ಇಲ್ಲಿದೆ ಮಾಹಿತಿ

 

ಮೂಲಂಗಿಯು ಅನೇಕ ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದರೊಂದಿಗೆ, ಈ ತರಕಾರಿ ವಿಟಮಿನ್ ಸಿ ಅನ್ನು ಸಹ ಹೊಂದಿದೆ. ಆದ್ದರಿಂದ ರಕ್ಷಿಸಲು ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಇದು ಉತ್ತಮ. ಚಳಿಗಾಲದ ಸಮಯದಲ್ಲಿ ಮೂಲಂಗಿಯನ್ನು ಏಕೆ ಸೇವಿಸಬೇಕು ಎಂಬುದನ್ನು ತಿಳಿಯೋಣ.

ರೋಗ ನಿರೋಧಕ ಶಕ್ತಿ ಮೂಲಂಗಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಚಳಿಗಾಲದ ಸಮಯದಲ್ಲಿ ಕಫ, ಶೀತದಿಂದ ನಿಮ್ಮನ್ನು ರಕ್ಷಿಸುತ್ತದೆ. ಮೂಲಂಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣ ಮೂಲಂಗಿ ದೇಹಕ್ಕೆ ಪೊಟ್ಯಾಸಿಯಮ್ ನೀಡುತ್ತದೆ. ಇದರಿಂದಾಗಿ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವ ಶಕ್ತಿಯಿದೆ. ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ಸೇವನೆ ಒಳ್ಳೆಯದು.

ಹೃದ್ರೋಗ ಮೂಲಂಗಿಯನ್ನು ಆಂಥೋಸಯಾನಿನ್ಗಳ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮೂಲಂಗಿಯನ್ನು ಸೇವಿಸುವುದರಿಂದ ಹೃದ್ರೋಗ ಸಮಸ್ಯೆ ಕಡಿಮೆಯಾಗುತ್ತದೆ. ಮೂಲಂಗಿಯಲ್ಲಿ ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡ್ಗಳು ಸಮೃದ್ಧವಾಗಿರುತ್ತವೆ. ಮೂಲಂಗಿಯು ರಕ್ತದಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.

ಫೈಬರ್ ಮೂಲಂಗಿ ಉತ್ತಮ ಪ್ರಮಾಣದ ಫೈಬರ್ಅನ್ನು ಹೊಂದಿರುತ್ತದೆ. ಪ್ರತಿದಿನ ಸಲಾಡ್ ತಯಾರಿಸಿ ಮೂಲಂಗಿಯನ್ನು ನೀವು ಸೇವಿಸಬಹುದು. ಇದರಲ್ಲಿರುವ ಫೈಬರ್ ಅಂಶದಿಂದಾಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹೊರತಾಗಿ ಮೂಲಂಗಿ ಯಕೃತ್ತು ಮತ್ತು ಮೂತ್ರಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.

ಹೊಳೆಯುವ ತ್ವಚೆ ಹೊಳೆಯುವ ತ್ವಚೆ ಪಡೆಯಬೇಕೆಂದರೆ ನೀವು ಮೂಲಂಗಿ ಸೇವನೆಯನ್ನು ಹೆಚ್ಚಿಸಬೇಕು. ಜ್ಯೂಸ್ ಮಾಡಿಯೂ ನೀವು ಮೂಲಂಗಿಯನ್ನು ಸೇವಸಬಹುದಾಗಿದೆ. ಇದು ಒಣ ಚರ್ಮ ಮತ್ತು ಮೊಡವೆಗಳನ್ನು ತೆಗೆದು ಹಾಕುತ್ತದೆ. ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆ ದೂರವಾಗುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಉತ್ತಮ ಪೋಷಕಾಂಶಗಳು ಕೆಂಪು ಮೂಲಂಗಿಯಲ್ಲಿ ವಿಟಮಿನ್ ಇ, ಎ, ಸಿ, ಬಿ6 ಮತ್ತು ಕೆ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೈಬರ್, ಸತು, ಪಟ್ಯಾಸಿಯಮ್, ರಂಜಕ, ಮೆಗ್ನೀಶಿಯಮ್, ಕ್ಯಾಲ್ಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Share post:

Subscribe

spot_imgspot_img

Popular

More like this
Related

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...