ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರು ತಮ್ಮ ಮಗ ಮಗಳು ಹಾಗೂ ಸಹೋದರ ಸಹೋದರಿ ಯನ್ನು ಚಿತ್ರರಂಗಕ್ಕೆ ಕರೆತರುವುದು ಹೊಸದೇನಲ್ಲ ಅದೇ ರೀತಿ ಸುದೀಪ್ ಅಳಿಯ ಸಂಚಿತ್ ಈಗಾಗಲೇ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಇದೇ ಮೊದಲ ಬಾರಿಗೆ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಹೀಗಾಗಿ ಮುಂಬೈನಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ನನ್ನ ಕೈಲಾಗದ ನೃತ್ಯವನ್ನು ನನ್ನ ಅಳಿಯನಾದರೂ ಗಂಭೀರವಾಗಿ ತೆಗೆದುಕೊಂಡು ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಅವನಿಗೆ ಯಶಸ್ಸು ಸಿಗಲಿ ಎಂದು ಕಿಚ್ಚ ಹಾರೈಸಿದ್ದಾರೆ.ಆದರೆ ಯಾವ ಸಿನಿಮಾ ಎನ್ನುವುದರ ಮಾಹಿತಿ ಸದ್ಯದಲ್ಲೇ ಹೊರ ಹಾಕಲಿದ್ದಾರೆ.