ಚಿನ್ನದ ದರ ಭಾರೀ ಇಳಿಕೆ; ತಿಂಗಳಲ್ಲೇ ಅತ್ಯಂತ ಕಡಿಮೆ!

Date:

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಕುಸಿತಗೊಂಡಿದ್ದು, ಗುರುವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯು ಇಳಿಕೆಗೊಂಡಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 1.5ರಷ್ಟು ಇಳಿಕೆಯಾಗಿ 47,799 ರೂಪಾಯಿಗೆ ತಲುಪಿದ್ದು, ಬೆಳ್ಳಿ ಬೆಲೆಯು ಕೆಜಿಗೆ ಶೇ. 1.6ರಷ್ಟು ಕಡಿಮೆಯಾಗಿ 70,345 ರೂಪಾಯಿಗೆ ತಲುಪಿದೆ.

ಎಂಸಿಎಕ್ಸ್ ಚಿನ್ನವು 47,700 ರಿಂದ 47,900 ರೂಪಾಯಿ ಆಸುಪಾಸು ವಹಿವಾಟು ನಡೆಸುತ್ತಿದೆ. ಯುಎಸ್‌ ಫೆಡರಲ್‌ ರಿಸರ್ವ್‌ ಇಂದು ಬಡ್ಡಿದರಗಳನ್ನು ನಿರೀಕ್ಷೆಗಿಂತ ಬೇಗ ಹೆಚ್ಚಿಸಬಹುದು ಎಂಬ ಸೂಚನೆಗಳ ಹಿನ್ನೆಲೆಯಲ್ಲಿ ಚಿನ್ನವು ಶೇ. 2.5ರಷ್ಟು ಕುಸಿತಗೊಂಡಿದೆ.

 

”ಅಲ್ಪಾವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆಯಾಗಬಹುದು ಮತ್ತು ಸುರಕ್ಷಿತ ಹೂಡಿಕೆಯತ್ತ ಬೇಡಿಕೆ ತಗ್ಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಚಿನ್ನವು ಶೀಘ್ರದಲ್ಲೇ 1800 ರಿಂದ 1780 ಮಟ್ಟವನ್ನು ಪರೀಕ್ಷಿಸಬಹುದು ಮತ್ತು ಬೆಳ್ಳಿ ಶೀಘ್ರದಲ್ಲೇ 26 ಡಾಲರ್‌ನಿಂದ 26.50 ಡಾಲರ್‌ನತ್ತ ಪರೀಕ್ಷಿಸಬಹುದು ಎಂದು ನಾವು ಅಂದಾಜಿಸಿದ್ದೇವೆ” ಎಂದು ಐಐಎಫ್‌ಎಲ್‌ ಸೆಕ್ಯುರಿಟೀಸ್‌ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿದರು.

ಸ್ಪಾಟ್‌ ಚಿನ್ನವು ಔನ್ಸ್‌ಗೆ ಶೇಕಡಾ 0.6ರಷ್ಟು ಏರಿಕೆಯಾಗಿ 1,822.36 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇಕಡಾ 0.5ರಷ್ಟು ಏರಿಕೆಗೊಂಡು 27.09 ಡಾಲರ್‌ಗೆ ಮುಟ್ಟಿದೆ. ಪಲ್ಲಾಡಿಯಮ್ ಶೇಕಡಾ 1ರಷ್ಟು ಇಳಿದು 2,770.49 ಡಾಲರ್, ಪ್ಲಾಟಿನಂ ಶೇಕಡಾ 0.5ರಷ್ಟು ಹೆಚ್ಚಾಗಿ 1,127.49 ಡಾಲರ್‌ಗೆ ತಲುಪಿದೆ.

Share post:

Subscribe

spot_imgspot_img

Popular

More like this
Related

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..?

ತುಳಸಿ ಗಿಡದಲ್ಲಿನ ಈ ಬದಲಾವಣೆಗಳು ನೀಡುವ ಸೂಚನೆಗಳೇನು..? ಮನೆಯ ಅಂಗಳದಲ್ಲಿ ಬೆಳೆದ ತುಳಸಿ...

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...