ಚಿನ್ನ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ!

0
79

ಒಲಿಂಪಿಕ್ಸ್ ಇತಿಹಾಸದಲ್ಲೇ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕ ಬಂದಿರಲಿಲ್ಲ. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ದೇಶಕ್ಕೆ ಚೊಚ್ಚಲ ಬಂಗಾರ ಗೆದ್ದಿದ್ದಾರೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಬಂಗಾರದ ಪದಕ ಜಯಿಸಿದ್ದಾರೆ. ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಲಭಿಸುತ್ತಿರುವ 7ನೇ ಪದಕ ಮತ್ತು ಚೊಚ್ಚಲ ಬಂಗಾರ. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಮೆರಗು ತಂದಿದ್ದಾರೆ.

ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಬಂಗಾರ ಎಸೆತದ ಸಾಧನೆ ತೋರಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 7ನೇ ಪದಕ
ಆಗಸ್ಟ್ 7ರ ಶನಿವಾರ 6 PM ಹೊತ್ತಿಗೆ ಭಾರತದ ಖಾತೆಯಲ್ಲಿ ಒಟ್ಟು 6 ಪದಕಗಳಿದ್ದವು. ಮೀರಾಬಾಯಿ ಗೆದ್ದ ಬೆಳ್ಳಿ ಪದಕ, ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಗೆದ್ದಿರುವ ಕಂಚಿನ ಪದಕ, ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಗೆದ್ದ ಕಂಚು, ರಸ್ಲರ್ ರವಿಕುಮಾರ್ ದಾಹಿಯ ಗೆದ್ದ ಬೆಳ್ಳಿ ಪದಕ, ಪುರುಷರ ಹಾಕಿ ತಂಡ ಗೆದ್ದ ಕಂಚಿನ ಪದಕ ಮತ್ತು ರಸ್ಲರ್ ಬಜರಂಗ್ ಪೂನಿಯಾ ಗೆದ್ದ ಕಂಚಿನ ಪದಕ ಮತ್ತು ನಿರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಗೆದ್ದ ಬಂಗಾರದ ಪದಕಗಳು ಇದರಲ್ಲಿ ಸೇರಿವೆ. ಇದು ಭಾರತದ ಇತಿಹಾಸದಲ್ಲೇ ಒಲಿಂಪಿಕ್ಸ್‌ ಕ್ರೀಡಾಕೂಟವೊಂದರಲ್ಲಿ ದೇಶಕ್ಕೆ ಬಂದ ಅತೀ ಹೆಚ್ಚಿನ ಪದಕಗಳು.

LEAVE A REPLY

Please enter your comment!
Please enter your name here