No menu items!
11.2 C
Munich
Friday, April 17, 2026

ಮೂಳೆ ಮುರಿದುಕೊಂಡಿದ್ದ ನೀರಜ್ ಇಂದು ಚಿನ್ನದ ಪದಕ ವಿಜೇತ!

Must read

ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಕ್ರೀಡಾ ಪಟು ನೀರಜ್ ಚೋಪ್ರಾ ಸದ್ಯ ಭಾರತದ ದೊಡ್ಡ ಹೀರೋ ಆಗಿ ಮಿಂಚುತ್ತಿದ್ದಾರೆ.

 

ಭಾರತದ ಕ್ರೀಡಾಭಿಮಾನಿಗಳು, ಸಿನಿಮಾ ಮಂದಿ, ಕ್ರೀಡಾಪಟುಗಳು ಹಾಗೂ ರಾಜಕಾರಣಿಗಳಿಂದ ಶಹಬಾಷ್ ಗಿರಿಯನ್ನು ಗಿಟ್ಟಿಸಿಕೊಂಡಿರುವ ನೀರಜ್ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ಇದೇ ವೇಳೆ ನೀರಜ್ ಚೋಪ್ರಾ ಮಾಡಿರುವ ಹಳೆಯ ಟ್ವೀಟ್ ವೊಂದು ವೈರಲ್ ಆಗಿದ್ದು ನೀರಜ್ ಚೋಪ್ರಾ ಮೇಲೆ ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ಗೌರವ ಹೆಚ್ಚಾಗುವಂತೆ ಮಾಡಿದೆ. 2019 ಮೇ 3ರಂದು ನೀರಜ್ ಚೋಪ್ರಾ ಮಾಡಿರುವ ಈ ಟ್ವೀಟ್ ನಲ್ಲಿ ಆಸ್ಪತ್ರೆಯಲ್ಲಿ ನೀರಜ್ ಚೋಪ್ರಾ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಹೀಗೆ ಎರಡೂವರೆ ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನೀರಜ್ ಚೋಪ್ರಾ ಇದ್ದು ಭಾರತದ ಪರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದು ವಿಜಯ ಪತಾಕೆಯನ್ನು ಹಾರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಈ ಟ್ವೀಟ್ ವೈರಲ್ ಆಗಿದ್ದು ನೀರಜ್ ಚೋಪ್ರಾ ಇಷ್ಟರ ಮಟ್ಟಕ್ಕೆ ಬರುವುದಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿರಬಹುದು ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article