ಚಿರಂಜೀವಿ, ಅಕ್ಷಯ್ ಜೊತೆ ಪುನೀತ್ ರಾಜ್ಕುಮಾರ್

Date:

ತೆಲುಗಿನ ಖ್ಯಾತ ನಟ ಚಿರಂಜೀವಿ, ಬಾಲಿವುವಡ್‌ನ ಅಕ್ಷಯ್‌ ಕುಮಾರ್, ತಮಿಳಿನ ಆರ್ಯ ಇನ್ನೂ ವಿವಿಧ ಭಾಷೆಯ ನಟರೊಟ್ಟಿಗೆ ನಟ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.

ಕೋವಿಡ್‌ ವಿರುದ್ಧ ರಾಷ್ಟ್ರದಾದ್ಯಂತ ಲಸಿಕೆ ಅಭಿಯಾನ ಜಾರಿಯಲ್ಲಿದ್ದು, ಲಸಿಕೆ ತೆಗೆದುಕೊಳ್ಳಲು ಜನರನ್ನು ಪ್ರೇರೇಪಿಸಲು, ಜಾಗೃತಿ ಮೂಡಿಸಲು ಜಾಹೀರಾತು ಮಾಡಲಾಗಿದ್ದು, ಕನ್ನಡದಲ್ಲಿ ಪುನೀತ್ ಅಭಿಯಾನದ ರಾಯಭಾರಿ ಆಗಿದ್ದಾರೆ.

ಎಫ್‌ಐಸಿಸಿಐ, ಐಬಿಎಫ್, ಐಎಎ ವತಿಯಿಂದ ಈ ಜಾಗೃತಿ ಅಭಿಯಾನ ನಡೆಯುತ್ತಿದ್ದು ಹಲವು ಭಾಷೆಗಳಲ್ಲಿಯೂ ಅಭಿಯಾನದ ನಡೆಯಲಿದೆ. ಕನ್ನಡಕ್ಕೆ ಪುನೀತ್ ರಾಜ್‌ಕುಮಾರ್, ತಮಿಳಿನಲ್ಲಿ ಆರ್ಯ, ತೆಲುಗಿನಲ್ಲಿ ಚಿರಂಜೀವಿ, ಹಿಂದಿ, ಮರಾಠಿ, ಪಂಜಾಬಿಯಲ್ಲಿ ಅಕ್ಷಯ್ ಕುಮಾರ್ ಜಾಗೃತಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಸಿಕೆ ಹಾಕಿಕೊಳ್ಳಲು ಈಗಲೂ ಹಲವಾರು ಮಂದಿ ಹಿಂಜರಿಕೆ ತೋರುತ್ತಿರುವ ಕಾರಣ ಈ ಜಾಹೀರಾತನ್ನು ಚಿತ್ರೀಕರಿಸಿ ಪ್ರಸಾರ ಮಾಡಲಾಗುತ್ತಿದೆ. ಲಸಿಕೆ ಮಾತ್ರವೇ ಅಲ್ಲದೆ ಕೋವಿಡ್ ಕುರಿತ ಜಾಗೃತಿ ಮೂಡಿಸಲು ಸಹ ಈ ನಟರು ಸಹಾಯ ಮಾಡಲಿದ್ದಾರೆ.

ನಟ ಪುನೀತ್ ರಾಜ್‌ಕುಮಾರ್ ಈಗಾಗಲೇ ಕೆಲವು ಸರ್ಕಾರಿ ಪ್ರಾಯೋಜಿತ ಜನಪರ ಕಾರ್ಯಕ್ರಮಗಳಿಗೆ ರಾಯಭಾರಿ ಆಗಿದ್ದಾರೆ. ಕೋವಿಡ್‌ ಸಂಕಷ್ಟಕ್ಕೆ ರಾಜ್ಯ ಸರ್ಕಾರಕ್ಕೆ ಹಣ ದೇಣಿಗೆ ನೀಡಿದ್ದಾರೆ ಜೊತೆಗೆ ಇತರೆ ಸೇವೆಗಳನ್ನು ಮಾಡಿದ್ದಾರೆ. ಅದನ್ನೆಲ್ಲ ಪರಿಗಣನೆಗೆ ಪಡೆದು ಪುನೀತ್ ಅವರನ್ನು ರಾಯಭಾರಿ ಅನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...