ಚಿರಂಜೀವಿ ತಮ್ಮ ಪತ್ನಿ ಜೊತೆಗೆ ಅಮರಾವತಿಯ ಜಗನ್ ಮೋಹನ್ ರೆಡ್ಡಿಯ ತಾಡಪಲ್ಲಿಯ ನಿವಾಸದಲ್ಲಿ ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ರಾಜಕೀಯ ಹಾಗೂ ಸಿನಿಮಾರಂಗದ ಬಗ್ಗೆ ಸಮಾಲೋಚನೆ ನಡೆಸಿರುವುದರಿಂದ ಚಿರು ರಾಜಕೀಯಕ್ಕೆ ಮರು ಎಂಟ್ರಿ ಆಗಲಿದ್ದಾರೆಯೇ ಎಂದು ಅವರ ಅಭಿಮಾನಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ.
ರಾಜಕೀಯದಿಂದ ದೂರ ಉಳಿದಿದ್ದ ಮೆಗಾಸ್ಟಾರ್ ಈಗ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್‍ರೆಡ್ಡಿ ಅವರನ್ನು ಭೇಟಿ ಆಗಿರುವುದರಿಂದ ಚಿರಂಜೀವಿ ಮತ್ತೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗುತ್ತಾರೆಯೇ ಎಂಬ ಅನುಮಾನಗಳು ದಟ್ಟವಾಗಿದೆ.